ನ್ಯೂಸ್

ಅಭಿನಯ ಚಕ್ರವರ್ತಿಗೆ ಅಡುಗೆ ಆಸಕ್ತಿ ಬಂದಿದ್ದು ಹೇಗೆ?; ಇಂಟ್ರೆಸ್ಟಿಂಗ್​​ ಕಹಾನಿ ಬಿಚ್ಚಿಟ್ಟ ಕಿಚ್ಚ ಸುದೀಪ್​​​ | Sudeep

ಅಭಿನಯ ಚಕ್ರವರ್ತಿ ಸುದೀಪ್(Sudeep)​ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಚಿರಪರಿಚಿತರು. ತಮ್ಮ ನಟನೆಯಿಂದ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ನಟ ಸುದೀಪ್​​ ಬಿಗ್​ಬಾಸ್​ ರಿಯಾಲಿಟಿ ಶೋ ಹೋಸ್ಟ್​ ಮಾಡಲು ಆರಂಭಿಸಿದಾಗಿನಿಂದ ಕರುನಾಡ ಮನೆ ಮಗ ಆಗಿದ್ದಾರೆ ಎಂದರೆ ತಪ್ಪಗಲಾರದು. ನಟನೆಗೂ ಸೈ.. ನಿರೂಪಣೆಗೂ ಸೈ.. ಗೆಳತನಕ್ಕೂ ಸೈ.. ಅಷ್ಟೇ ಯಾಕೆ ಅಡುಗೆ ಮಾಡುವುದರಲ್ಲಿಯೂ ಮೇಲುಗೈ. ಕಿಚ್ಚ ಸುದೀಪ್​ ಅವರು ಮಾಡುವ ಅಡುಗೆಯನ್ನು ನೋಡಿ ಮೂಗುಮುರಿಯುವವರೇ ಇಲ್ಲ ಎನ್ನಬಹುದು.

ಅಂದ್ಹಾಗೆ ಇಷ್ಟು ಸೀಸನ್​ ಬಿಗ್​ಬಾಸ್​ ಮನೆಯಲ್ಲಿನ ಪ್ರತಿಯೊಬ್ಬ ಸ್ಪರ್ಧಿಯು ಸುದೀಪ್​​ ಅವರ ಕೈರುಚಿಯನ್ನು ಸವಿದಿದ್ದಾರೆ. ಅಷ್ಟೇ ಅಲ್ಲ ತನ್ನ ಆಪ್ತರಿಗೆ ಆಗಾಗ ಕೈಯ್ಯಾರೆ ಅಡುಗೆ ಮಾಡಿ ಬಡಿಸ್ತಾರೆ. ಅದು ಅವರ ಇಷ್ಟದ ಹವ್ಯಾಸ. ಕಿಚ್ಚ ಮಾಡುವ ಅಡುಗೆಯನ್ನು ಸವಿದವರು ಬಾಯ್ತುಂಬ ಹೊಗಳುತ್ತಾರೆ. ಅಂದ್ಹಾಗೆ ಸುದೀಪ್​ ಅವರು ಇಷ್ಟು ರುಚಿಯಾಗಿ ಅಡುಗೆ ಮಾಡುವುದಾದರೂ ಹೇಗೆ... ಏನೀರಬಹುದ ಅದರ ಹಿಂದಿನ ಕಹಾನಿ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

ಕಿಚ್ಚ ಸುದೀಪ್​ ಅವರು ತಮಗೆ ಅಡುಗೆ ಮಾಡುವ ಆಸಕ್ತಿ ಬಂದಿದ್ದು ಹೇಗೆ ಎಂಬುದನ್ನು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿಮಗೆ ಅಡುಗೆ ಮಾಡುವ ಬಗ್ಗೆ ಆಸಕ್ತಿ ಬಂದಿದ್ದು ಹೇಗೆ ಎಂದು ಕೇಳಿದಾಗ, ಸುದೀಪ್​​ ಅವರು ಮೊದಲಿಗೆ ನಾನು ಚಿಕ್ಕವನಿದ್ದಾಗ ನಮ್ಮ ತಂದೆಯೊಂದಿಗೆ ಅಮ್ಮ ಕೂಡ ಸರೋವರ ಹೋಟೆಲ್​​​ಗೆ ಕೆಲಸಕ್ಕೆ ಹೋಗುತ್ತಿದ್ದರು. ನನಗೆ ಏನಾದರೂ ತಿನ್ನಬೇಕು ಅಂದರೆ ಆಗ ಏನು ಸಿಗುತ್ತಿರಲಿಲ್ಲ. ಅವಾಗ ಏನೇನೋ ಮಾಡಲು ಶುರು ಮಾಡಿದೆ ಎಂದು ಹೇಳಿದ್ದಾರೆ.

ಅವರು ಅಡುಗೆ ಮಾಡುವುದನ್ನು ನೋಡಿ ನಾನು ಕೆಟ್ಟುಕೆಟ್ಟದಾಗಿ ಅಡುಗೆ ಮಾಡಲು ಆರಂಭಿಸಿದ್ದು, ಅಡುಗೆ ಮಾಡುವ ಚುರು ಹುಚ್ಚು ಬಂದಿದ್ದು ಅಲ್ಲಿಂದ. ಆಮೇಲೆ ಇಷ್ಟಪಟ್ಟು ಅಡುಗೆ ಮಾಡುವುದನ್ನು ಕಲಿತೆ. ನಾನು ಮೊದಲು ಕಟ್ಲಿಟ್​ ಮಾಡಲು ಪ್ರಯತ್ನಪಟ್ಟೆ. ಏಕಂದ್ರೆ ಆಗ ನನಗೆ ಕಟ್ಲಿಟ್​ ಅಂದ್ರೆ ಇಷ್ಟವಿತ್ತು. ಅದಕ್ಕಾಗಿ ನನ್ನ ಪಾಲಕರು ಹೇಗೆ ಕಟ್ಲಿಟ್ಟ ಮಾಡುತ್ತಾರೆ ಎಂದು ನೋಡಿ ಕಟ್ಲಿಟ್​ ಟ್ರೈ ಮಾಡ್ದೆ. ಆದರೆ ಅದು ಕಲ್ಲಿಗಿಂತ ಗಟ್ಟಿಯಾಗಿತ್ತು ಅದು ನನ್ನ ಮೊದಲ ಪ್ರಯತ್ನ ಎಂದು ಹೇಳಿದರು.

ಅಲ್ಲಿಂದ ಆಸಕ್ತಿ ಬಂದು ಏನು ಮಾಡೋದು ಎಂದು ಆಲೋಚಿಸುತ್ತಿದ್ದೆ, ಬಳಿಕ ಸರೋವರ ಹೋಟೆಲ್​ನಲ್ಲಿ ಅಡುಗೆ ಕಲಿತೆ. ಇನ್ನೊಂದು ವಿಚಾರ ಎಂದರೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ನನಗೆ ರಜೆ ಎಂಬುದೇ ಇಲ್ಲ. ಸ್ಕೂಲ್​ ಮತ್ತು ಕಾಲೇಜಿಗೆ ಹೋಗಿ ಬಂದು ಮತ್ತು ರಜಾದಿನಗಳಲ್ಲಿ ಸರೋವರ ಹೋಟೆಲ್​ನಲ್ಲಿ ಕೆಲಸ ಮಾಡಬೇಕಿತ್ತು. ಶಾಲೆ ಮತ್ತು ಕಾಲೇಜುಗಳಲ್ಲಿ ರಜೆ, ಫ್ರೆಂಡ್, ಟ್ರಿಪ್​ ಇದೆಲ್ಲಾ ಇರಲಿಲ್ಲ. ಇದಕ್ಕೆಲ್ಲಾ ನನ್ನ ತಂದೆ ಪರ್ಮಿಷನ್​ ಕೊಟ್ಟಿಲ್ಲ.

ಆ ಸಮಯದಲ್ಲಿ ನನಗೆ ಫ್ರೆಂಡ್ಸ್​​ ಎಂಬುವವರೆ ಇಲ್ಲ. ಕ್ಲಾಸ್​ ಮುಗಿದ ತಕ್ಷಣ ಹೋಟೆಲ್​ಗೆ ಹೋಗಿ ಹೆಲ್ಪ್​ ಮಾಡ್ಬೇಕಿತ್ತು. ಹೀಗೆ ಇದ್ದಿದ್ದೆ ಅಡುಗೆ ಮನೆಯಲ್ಲಾದ್ರಿಂದ ಅಡುಗೆ ಮೇಲೆ ಆಸಕ್ತಿ ಬಂತು. ಅಡುಗೆಯನ್ನೇ ನನ್ನ ಫ್ರೆಂಡಾಗಿ ಮಾಡ್ಕೊಂಡೆ ಆದ್ದರಿಂದ ಇವತ್ತಿಗೆ ನಾನು ಅಡುಗೆಯನ್ನು ಖುಷಿಖುಷಿಯಾಗಿ ಮಾಡುತ್ತೇನೆ. ನನಗೆ ತಿನ್ನುವುದಕ್ಕಿಂತ ತಿನ್ನಿಸುವುದರಲ್ಲೇ ಖುಷಿ ಹೆಚ್ಚು. ನಾನು ತಿನ್ನೋದಕ್ಕೆಂದು ಅಡುಗೆ ಮಾಡೋದಿಲ್ಲ, ತಿನ್ನಿಸೋದಕ್ಕೆಂದೇ ಅಡುಗೆ ಮಾಡ್ತೀನಿ. ಇದರಲ್ಲಿ ಸಿಗುವಂತ ಖುಷಿ ಬೇರೆನೇ ಲೆವೆಲ್​​ ಎಂದು ಹೇಳಿದ್ದಾರೆ.

ಸದ್ಯ ಕಿಚ್ಚ ಸುದೀಪ್​​ ಮ್ಯಾಕ್ಸ್‌ ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಚಿತ್ರ ನಾಳೆ ಅಂದರೆ ಡಿಸೆಂಬರ್ 25, 2024 ರಂದು ಬಿಡುಗಡೆಯಾಗಲಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್​​ ಜತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ, ಸುನೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಂತರ ಸುದೀಪ್​ ನಿರ್ದೇಶಕ ಅನುಪ್ ಭಂಡಾರಿ ಜತೆಗೂಡಿ ಬಿಲ್ಲ ರಂಗ ಬಾಷಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.