ನ್ಯೂಸ್

ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ ಈ ಮನೆಮದ್ದು ಬಳಸಿ ! Hair health

Hair health: ಕಪ್ಪು ಮತ್ತು ಮೃದುವಾದ ಕೂದಲುಗಳು ಯಾವಾಗಲು ವ್ಯಕ್ತಿತ್ವಕ್ಕೆ ಸೌಂದರ್ಯವನ್ನು ತರುವಂತವು. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ಯುವಕರಲ್ಲೇ ಬಿಳಿ ಕುದಲುಗಳು ಹೆಚ್ಚುತ್ತಿದ್ದು, ಇದು ಅವರನ್ನು ಚಿಂತೆಗೆ ದೂಡುತ್ತಿದೆ. ಇದು ನಾವು ಸೇವಿಸುವ ಆಹಾರ, ಅತಿಯಾದ ಮೊಬೈಲ್​ ಬಳಕೆ, ನಿರಂತರ ಒತ್ತಡ ಮತ್ತು ನಿದ್ರೆಯ ಕೊರೆತೆಯೇ ಈ ಎಲ್ಲಾದಕ್ಕೂ ಸಮಸ್ಯೆ ಎಂದು ತಿಳಿದುಬಂದಿದೆ. ಇದರಿಂದಾಗಿ ಜನರು ಕೂದಲಿಗೆ ತಾತ್ಕಾಲಿಕ ಬಣ್ಣವನ್ನು ಹಾಕುವುದನ್ನು ಪ್ರಾರಂಭಿಸುತ್ತಾರೆ. ಇದು ಹೊರಗಿನ ನೋಟವನ್ನು ಸುಧಾರಿಸುತ್ತದೆ. ಮತ್ತೆ ಕೆಲವು ದಿನಗಳ ನಂತರ ಅದೇ ರೀತಿಯಲ್ಲಿ ಬಿಳಿ ಕೂದಲುಗಳು ಮತ್ತೆ ಕಾಣಿಸಲು ಪ್ರಾರಂಭಿಸುತ್ತವೆ.

ಕೂದಲಿನ ಬಣ್ಣವನ್ನು ಪಡೆಯಲು ದೇಹಕ್ಕೆ ಸರಿಯಾದ ಪೋಷಣೆ ಮತ್ತು ಆರೈಕೆ ಎರಡೂ ಅಗತ್ಯವಿದೆ. ಯೋಗ ಮತ್ತು ಜೀವನಶೈಲಿಯು ಯೌವನದ ಬಣ್ಣವನ್ನು ಮತ್ತೆ ಮರುಕಳಿಸುವಂತೆ ಮಾಡುತ್ತದೆ. ಹಾಗಾಗಿ ಈ ರೀತಿಯ ಮನೆಮದ್ದುಗಳನ್ನು ಬಳಸಿ ಇದು ನಿಮ್ಮ ಬಿಳಿಕೂದಲನ್ನು ಮೊದಲಿನ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.

1. ಅಶ್ವಗಂಧ ಚಹ

ಅಶ್ವಗಂಧವು ದೇಹದಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುವ ಶಕ್ತಿಶಾಲಿ ಗಿಡಮೂಲಿಕೆಯಾಗಿದೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ. ಒಂದು ಕಪ್​ ನೀರಿಗೆ ಅಶ್ವಗಂಧ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ಕುದಿಸಿ, ಅದಕ್ಕೆ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ದೇಹದಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ನಿದ್ರೆಯನ್ನು ಸುಧಾರಿಸುತ್ತದೆ. ಮೆದುಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

2. ದಾಸವಾಳ ಮತ್ತು ಮೊಸರಿನ ಪ್ಯಾಕ್​

ದಾಸವಾಳವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಕೂದಲನ್ನು ಬೇರುಗಳ ಆಳದಿಂದ ಪೋಷಿಸಲು ಸಹಾಯ ಮಾಡುತ್ತದೆ. ದಾಸವಾಳದ ದಳವನ್ನು ಒಣಗಿಸಿ ಅದರ ಪುಡಿಯನ್ನು ಮೊಸರಿನೊಂದಿಗೆ ಸೇರಿಸಿ ಪ್ಯಾಕ್​ ರೆಡಿಮಾಡಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ನಂತರ ಬೆಚ್ಚುಗಿನ ನೀರಿನಲ್ಲಿ ತೊಳೆಯಿರಿ. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.

3. ಯೋಗ ಆಸನಗಳು

ಕೂದಲಿನ ಆರೋಗ್ಯವು ಎಣ್ಣೆ ಮತ್ತು ದುಬಾರಿ ಶಾಂಪುವನ್ನು ಅಳವಡಿಸಿರುವುದಿಲ್ಲ. ದೇಹದಲ್ಲಿನ ರಕ್ತಪರಿಚಲನೆಯನ್ನೂ ಅವಲಂಬಿಸುತ್ತದೆ. ಪ್ರತಿನಿತ್ಯ 30 ನಿಮಿಷಗಳ ಕಾಲ ಸರ್ವಾಂಗಾಸನ, ಅಧೋಮುಖ ಸ್ವನಾಸನದಂತಹ ಯೋಗ ಆಸನಗಳನ್ನು ಮಾಡಿ. ಇದು ನೆತ್ತಿಗೆ ಆಮ್ಲಜನಕವನ್ನು ನೀಡಿ. ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ. ಅದೇ ರೀತಿಯಲ್ಲಿ ಪ್ರಾಣಯಾಮ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆ ಮಾಡಿ ನೈಸರ್ಗಿಕ ಕೂದಲಿನ ಬೇರುಗಳನ್ನು ಬಲವಾಗಿಸುತ್ತದೆ.

4. ಒಮೆಗಾ-3 ಮತ್ತು ಖನಿಜಯುಕ್ತ ಆಹಾರ

ಕೂದಲು ಕಪ್ಪಾಗಿಡಲು ಮತ್ತು ದಪ್ಪವಾಗಿಡಲು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ಮುಖ್ಯ. ಹಾಗಾಗಿ ನೀವು ಆಹಾರ ಸೇವಿಸುವಾಗ ಬಾದಾಮಿ, ವಾಲ್ನಟ್ಸ್, ಗೋಡಂಬಿ, ಅಗಸೆ ಬೀಜಗಳು, ಚೀಸ್, ಅಣಬೆಗಳು, ಪಾಲಕ್ ಮತ್ತು ಬ್ರೊಕೊಲಿಯನ್ನು ಸೇರಿಸಿ. ಈ ಆಹಾರಗಳು ಒಮೆಗಾ-3 ಕೊಬ್ಬಿನಾಮ್ಲಗಳು, ತಾಮ್ರ, ವಿಟಮಿನ್​ ಬಿ ಹಾಗೂ ಅಧಿಕ ಪ್ರೊಟೀನ್​ಗಳನ್ನು ಹೊಂದಿರುತ್ತದೆ. ಅಂತಹ ಸಮತೋಲಿತ ಆಹಾರಗಳನ್ನು ಸೇವಿಸುವುದರಿಂದ ಕೂದಲಿಗೆ ಸರಿಯಾದ ಪೋಷಣೆ ಸಿಗುತ್ತದೆ. ಇದು ಅಕಾಲಿಕ ಬೂದು ಬಣ್ಣವನ್ನು ತಪ್ಪಿಸಿ ಕೂದಲು ಕಪ್ಪಾಗಿರಲು ಸಹಾಯ ಮಾಡುತ್ತದೆ.

5. ಭೃಂಗರಾಜ್ ಮತ್ತು ಆಮ್ಲಾ ಎಣ್ಣೆ

ಭೃಂಗರಾಜ್​ ಮತ್ತು ಆಮ್ಲಾ ಕೂದಲಿಗೆ ಒಳ್ಳೆಯ ಔಷಧಿ ಎಂದರೆ ತಪ್ಪಾಗದು. ಈ ಎರಡೂ ಎಣ್ಣೆಗಳನ್ನು ಬೆರೆಸಿ ಮಲಗುವ ಮುನ್ನ ನೆತ್ತಿಯ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್​ ಮಾಡುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ, ಕೂದಲು ಕಪ್ಪಗಾಗಲು ಸಹಾಯ ಮಾಡುತ್ತದೆ. ಆಮ್ಲಾದಲ್ಲಿರುವ ವಿಟಮಿನ್​ ಸಿ ಮತ್ತು ಭೃಂಗರಾಜ್​ನಲ್ಲಿರುವ ನೈಸರ್ಗಿಕ ವರ್ಣದ್ರವ್ಯವು ಮೆಲನಿನ್​ ಉತ್ಪಾದನೆಯನ್ನು ಮಾಡಿ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.