ಅಮೆರಿಕಾ: ಹಾಲಿವುಡ್ ಚಿತ್ರರಂಗದ ಖ್ಯಾತ, ಅದ್ಭುತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇನದಲ್ಲಿ ಮೂಡಿಬಂದ 'ಓಪೆನ್‌ಹೈಮರ್' ಚಿತ್ರ ಜಾಗತಿಕವಾಗಿ ಉತ್ತಮ ಗಳಿಕೆಯೊಂದಿಗೆ ಮತ್ತು ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸದ್ಯ ಚಿತ್ರ ಯಶಸ್ವಿಯಾಗಿದ್ದು, ಇದೀಗ ಇದರ ಡಿಜಿಟಲ್ ರಿಲೀಸ್ ದಿನಾಂಕದ ಬಗ್ಗೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ.
ಇದನ್ನೂ ಓದಿ: ಮೌಢ್ಯಕ್ಕೆ ಮಗು ಬಲಿ ಪ್ರಕರಣ: ಕೊನೆಗೂ ಮನೆ ಸೇರಿದ ಬಾಣಂತಿ, ಇದನ್ನು ಮೊದಲೇ ಮಾಡಿದ್ದರೆ ಮಗು ಉಳಿಯುತ್ತಿತ್ತು
ಓಪನ್‌ಹೈಮರ್, ಜುಲೈ 21, 2023 ರಂದು 'ಬಾರ್ಬಿ' ಚಿತ್ರದೊಂದಿಗೆ ಏಕಕಾಲಕ್ಕೆ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ನೀಡಿತು. ಸದ್ಯ ಸಿನಿಪ್ರಿಯರ ಹೃದಯವನ್ನು ಗೆದ್ದಿರುವ ಈ ಸಿನಿಮಾದ ಡಿಜಿಟಲ್ ರಿಲೀಸ್ ನವೆಂಬರ್ 21, 2023 ರಂದು ಬಿಡುಗಡೆಯಾಗಲಿದೆ ಎಂದು ವರದಿ ಹೇಳಿದೆ.
ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ನಾಲ್ಕು ತಿಂಗಳ ನಂತರ 4K UHD, ಬ್ಲೂ-ರೇ ಮತ್ತು ಡಿವಿಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).