More

    ಈ ರಾಜ್ಯಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ; ದೇಶದಲ್ಲಿ ಇಂದು ಎಲ್ಲೆಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

    ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಿಸುವ ಮುಖೇನ ಎಚ್ಚರಿಕೆಯನ್ನು ನೀಡಿದೆ.

    ಇದನ್ನೂ ಓದಿ: ಟ್ರಾಫಿಕ್ ಕಿರಿ ಕಿರಿ; ಕಚೇರಿಗೆ ಹೋಗುವವರು ಸ್ವಂತ ಕಾರು ಬಳಸಬಾರದು ಎಂದ ಸೈಬರಾಬಾದ್ ಪೊಲೀಸರು

    ದೆಹಲಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ನೋಯ್ಡಾ, ಗುರುಗ್ರಾಮ್, ಲಕ್ನೋ ಮತ್ತು ಇತರ ನಗರಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಐಎಂಡಿ (Indian Metrological Department) ಇಂದಿನ ವರದಿಯಲ್ಲಿ ಉಲ್ಲೇಖಿಸಿದೆ. ಮುಂದಿನ 5-6 ದಿನಗಳಲ್ಲಿ ಮಧ್ಯಂತರ ತುಂತುರು ಮಳೆಯಾಗುವ ಮುನ್ಸೂಚನೆಯಿದ್ದರೂ, ತೀವ್ರತೆಯು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

    ಉತ್ತರಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ 4 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಲಕ್ನೋದಲ್ಲಿಯೂ ಕೂಡ ಅಧಿಕ ಮಳೆಯನ್ನು ನಿರೀಕ್ಷಿಸಲಾಗಿದೆ. ಈ ಹಿಂದೆ ಮುಂಬೈ ಮಹಾನಗರಕ್ಕೆ ಹವಾಮಾನ ಇಲಾಖೆ ‘ರೆಡ್’ ಅಲರ್ಟ್ ಘೋಷಣೆ ಮಾಡಿತ್ತು. ನಿರಂತರ ಮಳೆಯ ಹಿನ್ನಲೆ ಬೃಹತ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಇದೀಗ ಗುರುವಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಿದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ ಎನ್ನುವ ಚಿಂತೆ ಇದ್ಯಾ? ಇಂತಿವೆ ಕೆಲವು ಸಲಹೆ, ಮುನ್ನೆಚ್ಚರಿಕೆಗಳು…

    ಮಧ್ಯ ಮಹಾರಾಷ್ಟ್ರ ಸೇರಿದಂತೆ ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಕೊಂಕಣ-ಗೋವಾ, ದಕ್ಷಿಣ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).

    ಪವನ್​ ಕಲ್ಯಾಣ್​ ಫ್ಯಾನ್ಸ್​ಗೆ ಕೈಮುಗಿದು ಮನವಿ ಮಾಡಿದ ಸಾಯಿ ಧರಮ್ ತೇಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts