ನ್ಯೂಸ್

ಎರಡು ವಾರಗಳಲ್ಲಿ 'ಜೈಲರ್​' ಬಾಕ್ಸ್​ ಆಫೀಸ್​​ ಗಳಿಕೆಯೆಷ್ಟು?

ಆಂಧ್ರಪ್ರದೇಶ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಎರಡು ವಾರಗಳು ಕಳೆದಿವೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಘರ್ಜಿಸುವ ಮುಖೇನ ಇದೀಗ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ.

ಬಿಡುಗಡೆಯಾದ ಮೊದಲ ಎರಡು ವಾರಗಳಲ್ಲಿ ಚಿತ್ರ 525 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದ್ದು, ಈ ಬಗ್ಗೆ ಸ್ವತಃ ಚಿತ್ರತಂಡವೇ ಅಧಿಕೃತ ಮಾಹಿತಿ ಪ್ರಕಟಿಸಿದೆ. ಹಲವು ಹೊಸ ಸಿನಿಮಾಗಳು ಥಿಯೇಟರ್​ಗೆ ಎಂಟ್ರಿ ಕೊಟ್ಟರು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮಾತ್ರ 'ಜೈಲರ್' ನಿಲ್ಲಿಸಿಲ್ಲ. ಸದ್ಯ ಈ ಸಂಗತಿ ತಲೈವಾ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.

'ಜೈಲರ್‌' ಚಿತ್ರದಲ್ಲಿ ರಜನಿಕಾಂತ್​, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಮೋಹನ್ ಲಾಲ್, ಶಿವರಾಜಕುಮಾರ್, ಸುನಿಲ್, ವಸಂತ್ ರವಿ ಮತ್ತು ಯೋಗಿ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದಾರೆ,(ಏಜೆನ್ಸೀಸ್).