ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ನಾನ್ ವೆಜ್ ಪ್ರಿಯರಿಗಂತೂ ವಾರಂತ್ಯದಲ್ಲಿ ಬಿರಿಯಾನಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಅನ್ನಿಸುತ್ತದೆ. ಎಷ್ಟೋ ಮಾದರಿಯ ಬಿರಿಯಾನಿ ರೆಸಿಪಿ ಇದೆ. ಚಿಕನ್, ಮಟನ್, ಫಿಶ್ ಬಿರಿಯಾನಿ ಅಂತು ಎಲ್ಲರಿಗೂ ಅಚ್ಚುಮೆಚ್ಚು. ಬಿರಿಯಾನಿಯಲ್ಲಿ ಸಾಕಷ್ಟು ವೆರೈಟಿಸ್ ಇದೆ. ಅದರಲ್ಲಿ ಒಂದು ಮೊಘಲ್ ಸ್ಟೈಲ್ ಬಿರಿಯಾನಿ. ಇದನ್ನು ಮಾಡುವುದು ಹೇಗೆ.. ಇದರ ಸಿಂಪಲ್ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ. ಈ ವೀಕೆಂಡ್ನಲ್ಲಿ ನೀವೂ ಟ್ರೈ ಮಾಡಿ ಟೇಸ್ಟ್ ಮಾಡಿ..
- ಚಿಕನ್
- ಈರುಳ್ಳಿ
- ಮೊಸರು
- ಧನಿಯಾ ಪುಡಿ
- ಚಿಲ್ಲಿ ಪೌಡರ್
- ಗರಂ ಮಸಾಲ
- ಉಪ್ಪು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ಹಸಿಮೆಣಸಿನಕಾಯಿ ಪೇಸ್ಟ್
- ಏಲಕ್ಕಿ, ಬೇ ಎಲೆ, ದಾಲ್ಚಿನ್ನಿ, ಜೀರಿಗೆ
- ಪುದೀನ, ಕೊತ್ತಂಬರಿ ಸೊಪ್ಪು
- ಕೇಸರಿ ನೀರು
- ದ್ರಾಕ್ಷಿ
- ಅಡುಗೆ ಎಣ್ಣೆ
ಮೊಘಲ್ ಸ್ಟೈಲ್ ಚಿಕನ್ ಬಿರಿಯಾನಿ ಮಾಡುವ ವಿಧಾನ:
- ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಒಂದು ಪ್ಯಾನ್ನಲ್ಲಿ ನೀರನ್ನು ಇಟ್ಟು ಕುದಿಸಿ. ಅದಕ್ಕೆ ನೆನಸಿಟ್ಟಿದ್ದ ಅಕ್ಕಿ ಮತ್ತು ಉಪ್ಪು ಸೇರಿಸಿ. ಮುಕ್ಕಾಲು ಭಾಗ ಅಕ್ಕಿ ಬೇಯಿಸಿ.
- ಕನ್ ಅನ್ನು ಮೊಸರು, ಧನಿಯಾ ಪುಡಿ, ಸ್ವಲ್ಪ ಚಿಲ್ಲಿಪೌಡರ್, ಉಪ್ಪು, ಗರಂ ಮಸಾಲಾ ಪುಡಿಯೊಂದಿಗೆ ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
- ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ನಂತರ ಏಲಕ್ಕಿ, ಬೇ ಎಲೆ, ದಾಲ್ಚಿನ್ನಿ, ಜೀರಿಗೆ ಹಾಕಿ ಫ್ರೈ ಮಾಡಿ. ಬಳಿಕ ಶುಂಠಿ ಬೆಳ್ಳುಳ್ಳಿ, ಮೆಣಸಿನಕಾಯಿ ಪೇಸ್ಟ್ ಸೇರಿಸಿ 15 ನಿಮಿಷ ಮತ್ತು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಮತ್ತು 30 ಸೆಕೆಂಡುಗಳ ಕಾಲ ಫ್ರೈ ಮಾಡಿ.
- ಅದಕ್ಕೆ ಗೋಡಂಬಿ ಪೇಸ್ಟ್ ಸೇರಿಸಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ನಂತರ ಮ್ಯಾರಿನೇಟ್ ಮಾಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕತ್ತರಿಸಿದ ಪುದೀನ ಮತ್ತು ಕೊತ್ತಂಬರಿಯನ್ನು ಸೇರಿಸಿ. ಬಳಿಕ ನೀರನ್ನು ಸೇರಿಸಿ. ಚಿಕನ್ ಬೇಯುವವರೆಗೂ ಬಿಡಿ. ಬಳಿಕ ಗ್ರೇವಿ ಸಿದ್ಧವಾಗುತ್ತದೆ.
- ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್ ಗ್ರೇವಿಯನ್ನು ಕೆಳಭಾಗದಲ್ಲಿ ಹಾಕಿ ಅದರ ಮೇಲೆ ಮುಕ್ಕಾಲು ಭಾಗ ಬೇಯಿಸಿ ಇಟ್ಟಿರುವ ಅಕ್ಕಿ, ಕೇಸರಿ ನೀರು, ದ್ರಾಕ್ಷಿ, ಹುರಿದ ಈರುಳ್ಳಿ ಹಾಕಿ ಬಳಿಕ ಮತ್ತೊಂದು ಲೇಯರ್ ಚಿಕನ್ ಗ್ರೇವಿಯನ್ನು ಹಾಕಿ ಅದರ ಮೇಲೆ ಮುಕ್ಕಾಲು ಭಾಗ ಬೇಯಿಸಿ ಇಟ್ಟಿರುವ ಅಕ್ಕಿ, ಕೇಸರಿ ನೀರು, ದ್ರಾಕ್ಷಿ, ಹುರಿದ ಈರುಳ್ಳಿ ಹಾಕಿ.
- ಬಳಿಕ ಈ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ, ಹೊಗೆ ಹೊರಗೊಗದಂತೆ ಬಟ್ಟೆಯಿಂದ ಕಟ್ಟಿ. 10 ರಿಂದ 15 ನಿಮಿಷ ಕಾಲ ಕಡಿಮೆ ಉರಿಯಲ್ಲಿ ಬಿಡಿ. ಬಳಿಕ ಮುಚ್ಚಲ ತೆಗೆದು ನಿಧಾನವಾಗಿ ಮಿಕ್ಸ್ ಮಾಡಿ. ಒತ್ತಡ ಹಾಕಿ ಮಿಕ್ಸ್ ಮಾಡಿದರೆ ಅನ್ನ ಮುದ್ದೆಯಂತಾಗುತ್ತದೆ. ಆದ್ದರಿಂದ ನಿಧಾನವಾಗಿ ಮಿಶ್ರಣ ಮಾಡಿ.