ನ್ಯೂಸ್

ಗೇಮಿಂಗ್ ಪ್ರಿಯರಿಗಾಗಿ ಇಲ್ಲಿದೆ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು!

ಮೋಹನ್​ ಶೆಟ್ಟಿ

ನವದೆಹಲಿ: ಇಂದಿನ ದಿನಗಳಲ್ಲಿ ಬೆಳಗ್ಗೆ ಎದ್ದ ವೇಳೆಯಿಂದ ರಾತ್ರಿ ಮಲಗುವವರೆಗೂ ಸ್ಮಾರ್ಟ್‌ಫೋನ್‌ ಇಲ್ಲದೆ ದಿನಗಳನ್ನು ಉರಿಳಿಸಲು ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ, ತಂತ್ರಜ್ಞಾನದ ತ್ವರಿತ ಹೆಚ್ಚಳದೊಂದಿಗೆ, ಮೊಬೈಲ್​ ಬಳಕೆ ಹೇರಳವಾಗಿ ಹೆಚ್ಚುತ್ತಿವೆ.

ಗೇಮಿಂಗ್ ಪ್ರಿಯರು ಬಜೆಟ್ ರೇಂಜ್​ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗಿದ್ದು, ಈ ಪೋನ್​ಗಳು ಮಾರುಕಟ್ಟೆಯಲ್ಲಿ 15,000-20,000 ರೂ.ಗಳಲ್ಲಿ ಲಭ್ಯವಿದೆ. ಅವುಗಳು ಮಧ್ಯಮ ಬಜೆಟ್​ ಜತೆಗೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿವೆ. ಇವುಗಳ ಪೈಕಿ ಕೆಲವು ಬೆಸ್ಟ್ ಸ್ಮಾರ್ಟ್‌ಫೋನ್‌ ಈ ಕೆಳಕಂಡಂತಿವೆ ಅನುಸರಿಸಿ.

Oneplus Nord CE3 Lite 5G: ಒನ್​ಪ್ಲಸ್​ ಸಂಸ್ಥೆಯ ಹೊಸ ಫೋನ್ ಖರೀದಿಸಲು ನೀವು ಯೋಜಿಸುತ್ತಿದ್ದರೆ, Nord CE3 Lite 5G ಅತ್ಯುತ್ತಮ ಆಯ್ಕೆಯಾಗಿದೆ. ಈ ಫೋನಿನ ಬೆಲೆ ಮಾರುಕಟ್ಟೆಯಲ್ಲಿ 19,999 ರೂ. ಇದೆ. ಈ ಫೋನ್‌ನ ಸಾಧನದ ಗುಣಮಟ್ಟ ಮತ್ತು ಡಿಸ್‌ಪ್ಲೇ ವಿನ್ಯಾಸವು ತುಂಬಾ ಚೆನ್ನಾಗಿದೆ. ಈ ಸಾಧನವು Snapdragon 695 ಪ್ರೊಸೆಸರ್, 8GB RAM, 120Hz 6.72 ಇಂಚಿನ IPS LCD ಡಿಸ್ಪ್ಲೇ, 5000 mAh ಬ್ಯಾಟರಿ ಮತ್ತು ಸೂಪರ್​ವೂಕ್​ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ.

ವಿವೋ T2: ವಿವೋ ಕಂಪನಿಯ T2 ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 18,999 ರೂ. ಇದೆ. ವಿವೋ T2 ಸ್ನಾಪ್‌ಡ್ರಾಗನ್ 695 SoC, 6GB RAM, 90 Hz 6.38-ಇಂಚಿನ AMOLED ಡಿಸ್ಪ್ಲೇ ಮತ್ತು 4500 mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಫೋನ್‌ನ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ.

Oneplus Nord CE3 Lite 2: ಈ ಸ್ಮಾರ್ಟ್​ಫೋನ್​ 17,977 ರೂ.ಗೆ ಲಭ್ಯವಿದೆ. ಈ ಫೋನ್​ನಲ್ಲಿ ಸ್ನಾಪ್‌ಡ್ರಾಗನ್ 695 SoC, 6GB RAM ಹೊಂದಿದೆ. ಜತೆಗೆ 6.59 ಇಂಚಿನ IPS LCD ಡಿಸ್ಪ್ಲೇ, 5000 mAh ಬ್ಯಾಟರಿ ಮತ್ತು SuperWook ಚಾರ್ಜಿಂಗ್ ಅನ್ನು ಒಳಗೊಂಡಿದೆ.

Moto G73: ಒಂದು ಕಾಲದಲ್ಲಿ ಮೊಬೈಲ್​ ಮಾರ್ಕೆಟ್​ನಲ್ಲಿ ತನ್ನದೇ ಹವಾ ಕ್ರಿಯೇಟ್​ ಮಾಡಿದ್ದ ಮೊಟೊ ಕಂಪನಿಯು ಇದೀಗ Moto G73 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಈ ಪೋನಿನ ಬೆಲೆ 16,999 ರೂ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 930 SoC ಪ್ರೋಸೆಸರ್​, 8GB RAM, 6.5-ಇಂಚಿನ IPS LCD ಡಿಸ್ಪ್ಲೇ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.

ಗ್ರಾಹಕರು ನಾವು ತಿಳಿಸಿರುವ ಮಾಹಿತಿ ಅನುಸರಿಸುವುದರ ಜತೆಗೆ ಕಂಪನಿಯ ಅಧಿಕೃತ ವೆಬ್​ಸೈಟ್​ ಪರಿಶೀಲಿಸುವುದು ಉತ್ತಮ. ಆಯಾ ಕಂಪನಿಯ ಮೊಬೈಲ್​ ಬೆಲೆಗಳಲ್ಲಿ ಹೊಸ ನವೀಕರಣಗಳು ಉಂಟಾಗಿರಬಹುದು,(ಏಜೆನ್ಸೀಸ್​)