ಬೆಂಗಳೂರು: ನಗರದಲ್ಲಿ ಇಂದು ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಮಲ್ಲೇಶ್ವರಂನಲ್ಲಿ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಒಂದು ಕಾರು, ನಾಲ್ಕು ಬೈಕ್ಗಳು ಜಖಂಗೊಂಡಿವೆ.
ಇನ್ನು ವಿಪರೀತ ಮಳೆಯಿಂದಾಗಿ ಒಂದೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದರೆ, ಇನ್ನೊಂದೆಡೆ ಬಿಎಂಟಿಸಿ ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ. ಸಂಜೆ 8ಗಂಟೆಯಿಂದಲೂ ರಾಜಾಜಿ ನಗರ, ನವರಂಗ್, ಮಹಾಲಕ್ಷ್ಮಿ ಲೇಔಟ್, ಪೀಣ್ಯ ಕಡೆ ಯಾವುದೇ ಬಸ್ ಹೋಗದ ಕಾರಣ 200ಕ್ಕೂ ಹೆಚ್ಚು ಪ್ರಯಾಣಿಕರು ಕಷ್ಟಪಡುವಂತಾಯಿತು.
ಸತತ ಮೂರು ಗಂಟೆ ಕಳೆದರೂ ಬಸ್ಗಳೂ ಇಲ್ಲ, ಬಿಎಂಟಿಸಿ ಸಿಬ್ಬಂದಿಯೂ ಇಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪ್ರಯಾಣಿಕರು ಏರ್ಪೋರ್ಟ್ ಕಡೆಗೆ ಹೋಗುವ ಬಸ್ ತಡೆದು, ಗಲಾಟೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲೂ ಭರ್ಜರಿ ಮಳೆಯಾಗಿದ್ದು, ಶಿವಾನಂದ ಸರ್ಕಲ್ ಬ್ರಿಜ್ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ವಾಹನ ಸವಾರರು ಸಿಕ್ಕಾಪಟೆ ಪರದಾಡುವಂತಾಯಿತು.