ನ್ಯೂಸ್

ಕೇರಳದಲ್ಲಿ ಮುಂದುವರಿದ ವರುಣಾರ್ಭಟ! ಈ 8 ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್​, ಕರ್ನಾಟಕದ ಹಲವೆಡೆ ಮಳೆ | Heavy Rain

ಮೋಹನ್​ ಶೆಟ್ಟಿ

Heavy Rain: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇರಳ ಗಡಿಗಳಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಈ ಹಿನ್ನಲೆ ರಾಜ್ಯದ ಹಲವು ಜಿಲ್ಲೆಗಳಿಗೆ ಈಗಾಗಲೇ ಯೆಲ್ಲೋ ಮತ್ತು ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.

ಕೇರಳದಲ್ಲಿ ಇಂದೂ ವರುಣಾರ್ಭಟ ಮುಂದುವರೆದಿದ್ದು, ತಿರುವನಂತಪುರಂನ ಪುದುಕುರಿಚಿಯಲ್ಲಿ ದೋಣಿ ಮಗುಚಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಮೂವರು ಈಜಿ ದಡ ಸೇರಿಕೊಂಡರೆ, ಓರ್ವನ ಸುಳಿವು ಇನ್ನೂ ಸಿಕ್ಕಿಲ್ಲ. ಕಾಣೆಯಾದ ವ್ಯಕ್ತಿ ಪುದುಕುರಿಚಿ ಮೂಲದ ಆಂಟನಿ (65) ಎಂದು ಹೇಳಲಾಗಿದೆ. ಕೇರಳದ ಇಡುಕ್ಕಿ, ವಯನಾಡ್ ಮತ್ತು ತ್ರಿಶೂರ್ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಇಂದೂ ರಜೆ ಘೋಷಿಸಲಾಗಿದೆ.

ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ಗುರುವಾರ (ಜೂ.26) ವಯನಾಡ್, ಮಲಪ್ಪುರಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್ ಘೋಷಿಸಲಾಗಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ,(ಏಜೆನ್ಸೀಸ್).