ನ್ಯೂಸ್

ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ 'ಹಾರ್ಟ್ ಅಟ್ಯಾಕ್'; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

ಬೆಂಗಳೂರು: ದೇಶಾದ್ಯಂತ ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅದರಲ್ಲೂ ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕೂಡ ಆತಂಕ ಮೂಡಿಸಿದೆ. ಈ ನಡುವೆ ದೇಶದಲ್ಲಿ ಹಾರ್ಟ್​ ಅಟ್ಯಾಕ್​ ಟ್ರೆಂಡಿಂಗ್​ನಲ್ಲಿದೆ. ಅರ್ಥಾತ್ ಇಂದು ಟ್ವಿಟರ್​​ನಲ್ಲಿ ಹಾರ್ಟ್ ಅಟ್ಯಾಕ್ ಇಂಡಿಯಾ ಟ್ರೆಂಡಿಂಗ್​ನಲ್ಲಿದ್ದು, ಬಹಳಷ್ಟು ಮಂದಿ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ.

ದೇಶದಲ್ಲಿ ಅಲ್ಲಲ್ಲಿ ಬಹಳಷ್ಟು ಮಂದಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಹೃದಯಾಘಾತಕ್ಕೀಡಾಗಿ ಸತ್ತ ಪ್ರಕರಣಗಳು ಹಲವಾರು ವರದಿಯಾಗಿದ್ದು, ಜನರೂ ತಾವು ಕಂಡ ಕೇಳಿದ ಇಂಥ ಪ್ರಕರಣಗಳ ಬಗ್ಗೆ ಟ್ವಿಟರ್​ನಲ್ಲಿ ಹೇಳಿಕೊಳ್ಳುತ್ತ ಅನಿಸಿಕೆಗಳನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ.

ಕೆಲವರು ಕುಸಿದು ಬಿದ್ದು/ಹೃದಯಾಘಾತಕ್ಕೀಡಾಗಿ ಸಾವಿಗೀಡಾದವರ ಕುರಿತು ಉಲ್ಲೇಖಿಸಿದ್ದರೆ, ಇನ್ನು ಕೆಲವರು ಹೀಗೆ ಹೃದಯಾಘಾತ ಇತ್ತೀಚೆಗೆ ಹೆಚ್ಚಾಗಿರುವುದು ಯಾಕೆ, ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ಚರ್ಚೆ ಮಾಡುತ್ತ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲಾರಂಭಿಸಿದ್ದಾರೆ. ಹೀಗೆ ಅತಿಯಾಗಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಅಧ್ಯಯನ ನಡೆಸಬೇಕು ಎಂಬುದಾಗಿಯೂ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.'