ಗದಗ: ರಾಜ್ಯದಲ್ಲಿ ಡೆಂಘೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರೋಗ ನಿಯಂತ್ರಣ ಮಾಡೋದ್ರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗದಗದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಡೆಂಘೀ ಒಂದೂವರೆ ತಿಂಗಳಿಂದ ಆರಂಭವಾಗಿದ್ದರೂ ಅಧಿಕಾರಿಗಳು ಕೇರ್ ಲೆಸ್ ಆಗಿದ್ದಾರೆ. ಡಿಹೆಚ್ ಓ, ವೈದ್ಯರು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಹೊಸ ಮಳೆ ನೀರಿನಿಂದ ಬರುವ ಜ್ವರವಿದು. ಆದರೆ, ಜಾಗೃತಿ ಮೂಡಿಸುವ, ಔಷಧಿ ಸಿಂಪಡಣೆ ಯಾವುದನ್ನೂ ಸಹ ಕೈಗೊಂಡಿಲ್ಲ. ಆರಂಭದಲ್ಲಿ ಸೋಂಕಿತರನ್ನು ಬೇರೆ ಕೆಟಗರಿಗೆ ಹಾಕಿ ಡೆಂಘೀ ಸಂಖ್ಯೆ ಕಡಿಮೆ ತೋರಿಸುವ ಪ್ರಯತ್ನ ಮಾಡಿದರು. ಪರೀಕ್ಷೆ ಕೂಡ ಬಹಳ ಕಡಿಮೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ದೊಡ್ಡ ಮಟ್ಟದಲ್ಲಿ ವ್ಯಾಪಕವಾಗಿ ಡೆಂಘೀ ಹರಡುತ್ತಿದೆ. ಅವರ ಪ್ರಕಾರ 7000 ಡೆಂಗ್ಯೂ ಸೋಂಕಿತರ ಸಂಖ್ಯೆಯಿದೆ. ಸತ್ಯ ಹೇಳಬೇಕು ಅಂದ್ರೆ ಇದರ ಎರಡು ಪಟ್ಟು ಸೋಂಕಿತರ ಸಂಖ್ಯೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಸರ್ಕಾರ ಡೆಂಘೀ ನಿಯಂತ್ರಣ ಮಾಡೋದ್ರಲ್ಲಿ ವಿಫಲವಾಗಿದೆ. ಉಚಿತವಾಗಿ ಡೆಂಘೀ ಟೆಸ್ಟ್ ಆಗಬೇಕು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.