ನ್ಯೂಸ್

ನೀವು ಸಾಮಾನ್ಯ ಚಹಾ ಬದಲು ರೋಸ್ ಟೀ ಕುಡಿಯಿರಿ; ಗುಲಾಬಿ ಚಹಾದ ಆರೋಗ್ಯ ಪ್ರಯೋಜನಗಳು ಇಂತಿವೆ...

ಬೆಂಗಳೂರು: ಚಹಾ ಎಂದರೆ ಕೆಲವರಿಗೆ ತುಂಬಾ ಇಷ್ಟ. ಚಹಾವನ್ನು ಭಾರತದ ರಾಷ್ಟ್ರೀಯ ಪಾನೀಯವೆಂದು ಪರಿಗಣಿಸಲಾಗುತ್ತದೆ. ಚಹಾ ಕುಡಿಯೋದ್ರಿಂದ ಮೈಂಡ್​​​​​ ರಿಫ್ರೆಶ್​​​ ಆಗುತ್ತದೆ ಎನ್ನುವುದು ಹಲವರ ವಾದ. ಚಹಾ, ಕಾಫಿ, ಗ್ರೀನ್ ಟೀಯನ್ನು ಕುಡಿಯುವ ನೀವು ರೋಸ್ ಟೀ ಎಂದು ಬದಲಾಯಿಸಿದರೆ ರುಚಿಯ ಜೊತೆಗೆ ಆರೋಗ್ಯವನ್ನೂ ಪಡೆಯಬಹುದು.

ಹಾಗಾದರೆ ಬನ್ನಿ ಈ ರೋಸ್ ಟೀ ಮಾಡುವುದು ಹೇಗೆ? ಈ ಚಹಾದ ಆರೋಗ್ಯ ಪ್ರಯೋಜನಗಳೇನು? ಅಂತಹ ವಿಷಯಗಳನ್ನು ತಿಳಿದುಕೊಳ್ಳೋಣ....

ರೋಸ್​​ ಟೀ ಮಾಡುವುದು ಹೇಗೆ?: ಮೊದಲು ಒಂದು ಪಾತ್ರೆಯನ್ನು ಒಲೆಯ ಮೇಲೆ ಇರಿಸಿ ಮತ್ತು ಅದರಲ್ಲಿ ನೀರನ್ನು ಸುರಿಯಿರಿ. ನೀರು ಕುದಿಯುತ್ತಿರುವಾಗ ಒಣ ಗುಲಾಬಿ ದಳಗಳನ್ನು ಅದರಲ್ಲಿ ಹಾಕಬೇಕು. ನಂತರ ನೀರಿಗೆ ಜೇನುತುಪ್ಪವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಅದರ ನಂತರ ನೀರನ್ನು ಫಿಲ್ಟರ್ ಮಾಡಿ ಮತ್ತು ಒಂದು ಕಪ್ನಲ್ಲಿ ತೆಗೆದುಕೊಳ್ಳಬೇಕು. ಅದರ ನಂತರ ಈ ರೋಸ್ ವಾಟರ್ ನಲ್ಲಿ ಗ್ರೀನ್ ಟೀ ಬ್ಯಾಗ್ ಹಾಕಿ. ಸ್ವಲ್ಪ ಹೊತ್ತು ಹಾಗೆಯೇ ಇಟ್ಟ ನಂತರ ಗ್ರೀನ್ ಟೀ ಬ್ಯಾಗ್ ತೆಗೆದು ಪಕ್ಕಕ್ಕೆ ಎಸೆಯಿರಿ. ಹೀಗಾಗಿಯೇ ಗುಲಾಬಿ ಚಹಾವು ರಡ್ಡಿಯಾಗಿದೆ. ಗುಲಾಬಿ ಗ್ರೀನ್ ಟೀ ಬ್ಯಾಗ್ ಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಖರೀದಿಸಬಹುದು.

ಗುಲಾಬಿ ಚಹಾದ ಪ್ರಯೋಜನಗಳು: 1) ನಿಯಮಿತವಾಗಿ ರೋಸ್ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

2)  ಕೆಮ್ಮು, ನೆಗಡಿ ಮತ್ತು ಜ್ವರದಂತಹ ರೋಗಲಕ್ಷಣಗಳಿಂದ ಸದಾ ಬಳಲುತ್ತಿರುವವರು ಗುಲಾಬಿ ಚಹಾವನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

3)  ಬೆಳಗ್ಗೆ ಒಂದು ಕಪ್ ರೋಸ್ ಟೀ ಕುಡಿದರೆ ಒತ್ತಡ ದೂರವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

4) ಒತ್ತಡ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ರೋಸ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ.

5) ಗುಲಾಬಿ ಟೀ ಕುಡಿಯುವ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು ಬರುವುದಿಲ್ಲ.

ಗಮನಿಸಿ: ಮೇಲಿನವು ಮೂಲಭೂತ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಉತ್ತಮ.