More

    ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ?

    ಬೆಂಗಳೂರು: ಬಿಗ್​ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಅರೆಸ್ಟ್ ಮಾಡಿದ್ದಾರೆ. ಈ ಕುರಿತಾಗಿ ಕೆಲವು ಇಂಟ್ರಸ್ಟಿಂಗ್​​ ಮಾಹಿತಿ ಹೊರ ಬಿದ್ದಿದೆ.

    ಇದನ್ನೂ ಓದಿ: “ಗಂಗೆ ಬಾರೆ ತುಂಗೆ ಬಾರೆ” ಸಿನಿಮಾ ನಟಿ ಸುನೈನಾ ಆಸ್ಪತ್ರೆಗೆ ದಾಖಲು
    ಕಳೆದ 2 ವಾರಗಳ ಹಿಂದೆ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್​​​ ಸಂತೋಷ್​​ ಅವರು ಹುಲಿ ಉಗುರು ಇರುವ ಲಾಕೆಟ್ ಹಾಕಿ  ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಲಾಕೆಟ್ ಹುಲಿ ಉಗುರು ಇರಬಹುದಾ? ಎನ್ನುವ ಅನುಮಾನ ಮೂಡಿತ್ತು. ದೂರು ಕೂಡಾ ದಾಖಲಾಗಿತ್ತು. ಈ ಕಾರಣದಿಂದಲೇ ಅರಣ್ಯಾಧಿಕಾರಿಗಳು ಬಿಗ್ ಬಾಸ್​ಗೆ ತೆರಳಿ ಅವರನ್ನು ಅರೆಸ್ಟ್ ಮಾಡಿದ್ದಾರೆ.

    ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ?
    ಕುತ್ತಿಗೆಯಲ್ಲಿ ಹುಲಿಯ ಉಗುರು!: ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.

    ದೂರು ದಾರ ಹೇಳಿದ್ದೇನು?: ದೂರು ನೀಡಿರುವ ಶರತ್ ಮಾಧ್ಯಮಗಳ ಜೊತೆ ಮಾತನಾಡಿ, ‘ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿಯುಗುರು ಇರುವ ಪದಕವನ್ನು ಅವರು ಧರಿಸಿದ್ದರು. ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ರೂಲ್ಸ್ ಪಾಲನೆ ಮಾಡಬೇಕು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು’ ಎಂದಿದ್ದರು.

    ವರ್ತೂರು ಸಂತೋಷ್ ಹೇಳಿದ್ದೇನು?: ಸದ್ಯ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ‘ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ ಎಂದು ಅವರು ಅರಣ್ಯಾಧಿಕಾರಿಗಳ ಎದುರು ಹೇಳಿದ್ದಾರಂತೆ ಎನ್ನಲಾಗಿದೆ. ಈ ಮೂಲಕ ತಮಗೆ ಹುಲಿ ಉಗುರು ಸಿಕ್ಕಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ:  VIDEO | ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

    ಇದು ನಾನ್ ಬೇಲ್ ಕೇಸ್: ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ಸದ್ಯ ಸಂತೋಷ್ ಅವರ ಬಳಿ ಇದ್ದಿದ್ದು ಹುಲಿ ಉಗುರು ಹೌದು ಎಂಬುದು ಸಾಬೀತಾದರೆ ಅವರಿಗೆ ಶಿಕ್ಷೆ ಆಗುವ ಸಾಧ್ಯತೆ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಇವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಇದು ನಾನ್ ಬೇಲ್ ಕೇಸ್ ಆಗಿರುವುದರಿಂದ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅವರನ್ನು ಪ್ರೊಡ್ಯೂಸ್ ಮಾಡಲಾಗುತ್ತೆ ಎಂದಿದ್ದಾರೆ ವಲಯ ಅರಣ್ಯ ಅಧಿಕಾರಿಗಳು. ಈ ಪ್ರಕರಣ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts