ನ್ಯೂಸ್

VIDEO| ಮಕ್ಕಳಿಗೆ ಕಸ ಗುಡಿಸಲು ಹೇಳಿ ಚಾಪೆ ಹಾಸಿ ಮಲಗಿದ ಮುಖ್ಯೋಪಾಧ್ಯಾಯ

ಭೋಪಾಲ್​: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಗೆ ಪಾಠ ಮಾಡದೆ ಅವರ ಬ್ಯಾಗನ್ನು ತಲೆ ದಿಂಬು ಮಾಡಿಕೊಂಡು ನಿದ್ರಿಸುತ್ತಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯ ಲವಕುಶ ನಗರದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯ ಕ್ಲಾಸ್​ ರೂಮಿನಲ್ಲಿ ಮಲಗಿರುವುದು ಕಂಡು ಬಂದರೆ ಇತ್ತ ವಿದ್ಯಾರ್ಥಿಗಳು ಶಾಲೆಯ ಸ್ವಚತೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ.

ಛತ್ತರ್​ಪುರ ಜಿಲ್ಲೆಯ ಲವಕುಶನಗರದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಜೇಶ್​ ಕುಮಾರ್​ ಅಡ್ಜಾರಿಯಾ ತರಗತಿಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ದೂರಿದ್ದರು. ಈ ಬಗ್ಗೆ ವಿಚಾರಿಸಲೆಂದು ಶಾಲೆಗೆ ಬಂದಾಗ ಶಿಕ್ಕಷನ ನಿಜ ಬಣ್ಣ ಬಯಲಾಗಿದ್ದು, ಪೋಷಕರು ಘಟನೆಯನ್ನು ತಮ್ಮ ಮೊಬೈಲ್ ಪೋನಿನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮುಖೋಪಾಧ್ಯಾಯನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ತಪ್ಪಿತಸ್ಥನನ್ನು ಅಮಾನತ್ತಿನಲ್ಲಿರಿಸಿ ವಿಸ್ತೃತ ತನಿಖೆಗೆ ಆದೇಶಿಸಿದೆ.