ನ್ಯೂಸ್

ದೇವೇಗೌಡರು ಮನೆಯಲ್ಲಿದ್ದು ಸಲಹೆ ನೀಡಿದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಎಚ್​ಡಿಕೆ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ತಮ್ಮ ತಂದೆ ದೇವೇಗೌಡರ ಹುಟ್ಟುಹಬ್ಬದ ಸಂದರ್ಭದಲ್ಲಿ ವೆಂಕಟೇಶ್ವರ ಸನ್ನಿಧಾನದಲ್ಲಿ ಪೂಜೆ ಮಾಡಿಸಿದ್ದರು.

ತಮ್ಮ ತಂದೆಯ ಹುಟ್ಟುಹಬ್ಬದಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ "ದೇವೇಗೌಡರು 91ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದಾರೆ. ವೆಂಕಟೇಶ್ವರ ಸನ್ನಿದಾನ, ಅವರ ಆರೋಗ್ಯ ಸಮಸ್ಯೆ ಕೈಮೀರಿದಾಗ ಈ ಕ್ಷೇತ್ರದಲ್ಲಿ ಪೂಜೆ ಮಾಡಿಸೋ ಮೂಲಕ ದೇವೇಗೌಡರ ಆಯುಷ್ಯಕ್ಕೆ ಇಲ್ಲಿ ಪೂಜೆ ಮಾಡಿಸಲಾಗಿತ್ತು.

ಜೀವಕ್ಕೆ ಅಪಾಯ ಬಾರದಂತೆ ಆಯುಷ್ಯ ಹೋಮ

ಜೀವಕ್ಕೆ ಅಪಾಯ ಬರದಂತೆ ಆಯುಷ್ಯ ಹೋಮ ಮಾಡುವ ಕೆಲಸ ಮಾಡಲಾಗಿದೆ. ಕುಟುಂಬ ಕೂಡ ಅವರ ಆಯುಷ್ಯಕ್ಕೆ ಪೂಜೆ ಮಾಡಿದೆ. ನನ್ನ ವಯಕ್ತಿಕ ಅಭಿಪ್ರಾಯ ಅವರು ಮನೆಯಲ್ಲಿದ್ದು ಸಲಹೆ ನೀಡಿದ್ರೆ ಸಾಕು. ಅವರು ಚುನಾವಣಾ ಫಲಿತಾಂಶ ಫಲಿತಾಂಶ ಆತಂಕದಲ್ಲಿ ಅವರೇ ನಾಯಕತ್ವ ವಹಿಸೋದು ಬೇಡ.

ರಾಜಕೀಯದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ

ಯಾಕಂದ್ರೆ ನನಗೆ ಅವರ ಆರೋಗ್ಯ ಮುಖ್ಯ. ನಾವಿನ್ನೂ ರಾಜಕಾರಣದಲ್ಲಿ ಅಷ್ಟು ಕ್ಷೀಣಿಸಿಲ್ಲ. ಚುನಾವಣೆಯಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ. ದೇವೇಗೌಡರು 1989ರಲ್ಲಿ ಎರಡು ಕಡೆ ಸೋತು, ಎರಡೇ ಸ್ಥಾನ ಗೆಲ್ಲಲಾಗಿತ್ತು. ಐದೇ ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿ, ದೇಶದ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ರು. ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ.

ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಜನತೆ ಈಗಿನ ಫಲಿತಾಂಶ ಬಗ್ಗೆ ಅವರಿಗೆ ಮನವರಿಕೆ ಆಗಲಿದೆ. ಜನತಾದಳ ಪಕ್ಷದ ಅನಿವಾರ್ಯತೆ ಬಗ್ಗೆ ಗೊತ್ತಾಗಲಿದೆ" ಎಂದು ಹೇಳಿಕೆ ನೀಡಿದ್ದಾರೆ.