Hdfc Bank 
ನ್ಯೂಸ್

Hdfc Bank ಅಂಗಸಂಸ್ಥೆ ಎಚ್‌ಡಿಬಿಯಿಂದ ಹಣಕಾಸು ಸೇವೆಗಳ ಐಪಿಒಗೆ ಅನುಮತಿ!

ಮುಂಬೈ: Hdfc Bank ತನ್ನ ಅಂಗಸಂಸ್ಥೆ ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್​ಗೆ ಹಣಕಾಸು ಸೇವೆಗಳ ಐಪಿಒಗೆ ಅನುಮತಿ ನೀಡಿದೆ.

ತನ್ನ ಮಾತೃಸಂಸ್ಥೆಯಾದ Hdfc Bank ಬ್ಯಾಂಕ್ ಕಳೆದ ವಾರ ಎಚ್‌ಡಿಬಿ ಹಣಕಾಸು ಸೇವೆಗಳ ಐಪಿಒಗೆ ಅನುಮತಿ ನೀಡಿರುವುದಾಗಿ ವರದಿಯಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಡಳಿತ ಮಂಡಳಿಯು 2,500 ಕೋಟಿ ರೂ. ಮೌಲ್ಯದ ತಾಜಾ ಷೇರುಗಳನ್ನು ನೀಡುವುದರ ಜೊತೆಗೆ ಅಸ್ತಿತ್ವದಲ್ಲಿರುವ ಷೇರುದಾರರಿಂದ ಆಫರ್ ಫಾರ್ ಸೇಲ್ ಮೂಲಕ ಷೇರುಗಳನ್ನು ಮಾರಾಟ ಮಾಡಲು ಅನುಮೋದಿಸಿದೆ.

ಆರ್​ಬಿಐಗೆ ದಾಖಲೆ ಸಲ್ಲಿಸಲಿರುವ Hdfc Bank:

ಬಜಾಜ್ ಹೌಸಿಂಗ್ ಫೈನಾನ್ಸ್ ಮೆಗಾ ಐಪಿಒ ನಂತರ ಹೆಚ್ಚು ನಿರೀಕ್ಷಿತ ಬ್ಯಾಂಕಿಂಗ್​ ಯೇತರ ಹಣಕಾಸು ಸಂಸ್ಥೆ ಇದಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿದ ಕಡ್ಡಾಯ ನಿಯಮಗಳ ಪ್ರಕಾರ, ಕರಡು ದಾಖಲೆಗಳನ್ನು ಶೀಘ್ರದಲ್ಲೇ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸಲ್ಲಿಸಲು ಎಚ್​ಡಿಎಫ್​ಸಿ ಆಡಳಿತ ಮುಂದಾಗಿದೆ ಎನ್ನಲಾಗಿದೆ. ಇದು ಬ್ಯಾಂಕಿಂಗ್ ವಲಯಗಳಲ್ಲಿ ಬಾರಿ ಚರ್ಚೆ ಹುಟ್ಟುಹಾಕಿದೆ.

ಕಂಪನಿಗಳು ಆರ್​ಬಿಐನ ನಿಯಮಗಳನ್ನು ಪಾಲಿಸಬೇಕಿದ್ದು, ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತವೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು ಆರಂಭಿಕ ಸಾರ್ವಜನಿಕ ರಿಂದ ಷೇರು ಸಂಗ್ರಹಣೆಗೆ ತಯಾರಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಎಚ್​ಡಿಎಫ್​ಸಿ ಸಹ ಮುಂದಾಗಿದೆ ಎಂದು ತಜ್ಞರು ಹೇಳುತ್ತಾರೆ.