ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ಗುಡುಗಿದ್ದರು. ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಾ ಬರುತ್ತಿವೆ. ಜೆಡಿಎಸ್ಗೆ ನೀಡುವ ಮತ ಕಾಂಗ್ರೆಸ್ ಪಾಲಾಗುತ್ತದೆ. ಅಂತೆಯೇ ಜೆಡಿಎಸ್ಗೆ ಮತ ನೀಡುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳಿದ್ದರು.
ಇದೀಗ ಈ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮೋದಿ ಪ್ರಧಾನಿಯಾದ 10 ವರ್ಷದಲ್ಲಿ ಕರ್ನಾಟಕದಲ್ಲಿ ಏನು ಅಭಿವೃದ್ಧಿ ಆಗಿದೆ. ಈ ಬಗ್ಗೆ ತೀರ್ಮಾನ ಮಾಡುವ ರಾಜಕೀಯ ಪ್ರಬುದ್ದತೆ ನಾಡಿನ ಜನರಿಗಿದೆ. ಮೋದಿ ಹೇಳಿಕೆಗೆ ಪ್ರತಿಕ್ರಿಯೆ ಆಗತ್ಯ ಇಲ್ಲ. ಏಳೂವರೆ ಕೋಟಿ ಜನರಿಗೆ ತೀರ್ಪು ಕೊಡುವ ಶಕ್ತಿ ಇದೆ. ಜೆಡಿಎಸ್ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ಗೆ ಮತ ಕೊಡಬೇಡಿ ಎಂದು ಹೇಳುವ ಅಧಿಕಾರ ಮೋದಿ ಅವರಿಗೆ ಇದೆಯಾ? ಆದರೆ ತೀರ್ಪು ಕೊಡುವ ಅಧಿಕಾರ ನಾಡಿನ ಜನರಿಗೆ ಇದೆ. ಹೇಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನಾತ್ಮಕವಾಗಿ ತೀರ್ಪು ನೀಡುವ ಹಕ್ಕು ಜನರಿಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬ ಪ್ರಬುದ್ದತೆ ಜನರಲ್ಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.