ನ್ಯೂಸ್

ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಮೋದಿ ಭೇಟಿಯಾದ ಎಚ್‌ಡಿ ದೇವೇಗೌಡ: ಇಲ್ಲಿವೆ ಪೋಟೋಗಳು...!

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ನಡೆಯಿತು.

ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದು, ಮಹತ್ವದ ಚರ್ಚೆ ಮಾಡಲಾಗಿದೆ.

ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಭೇಟಿ ವೇಳೆ ಕರ್ನಾಟಕ ಸೇರಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, “7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾದೆ. ಅವರನ್ನು ಭೇಟಿಯಾಗುವುದೇ ಗೌರವದ ಸಂಗತಿಯಾಗಿದೆ. ಅವರು ಪ್ರಮುಖ ವಿಷಯಗಳ ಕುರಿತು ಹೊಂದಿರುವ ಬುದ್ಧಿವಂತಿಕೆ ಮತ್ತು ದೃಷ್ಟಿಕೋನವು ತುಂಬಾ ಆಳ ಮತ್ತು ಮೌಲ್ಯಯುತವಾದದ್ದು ಎಂಬುದಾಗಿ ಮೋದಿ ಪೋಸ್ಟ್‌ ಮಾಡಿದ್ದಾರೆ.

ಅವರು ನನಗೆ ನೀಡಿದ ಕಲಾಕೃತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿಯನ್ನು ನೆನಪಿಸಿತು ಎಂದು ತಮ್ಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.