ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೈಲಿನಿಂದ ಸರ್ಕಾರ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿ ಇದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಜೊತೆಗೆ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಿಎಂ ಕ್ರೇಜಿವಾಲ್ ರಾಜೀನಾಮೆಗೆ ಅನಗತ್ಯವಾಗಿ ಒತ್ತಾಯಿಸಬಾರದು ಎಂಬ ಸೂಚನೆ ನೀಡಬೇಕು ಎನ್ನುವ ಕೋರಿಕೆಯೂ ಈ ಅರ್ಜಿಯಲ್ಲಿತ್ತು.
ಅರವಿಂದ್ ಕ್ರೇಜಿವಾಲ್ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ನ್ಯಾಯಾಂಗ ಬಂಧನದಲ್ಲಿಮ ಇರುವಾಗ ಯಾವುದೇ ಸೌಲಭ್ಯ ಒದಗಿಸುವ ವಿಚಾರವಾಗಿ ಆದೇಶ ನೀಡುವ ಅಗತ್ಯ ಇಲ್ಲ ಎಂದು ಅರ್ಜಿಯ ವಿಚಾರಣೆ ನಡೆಸಿದಿ ಹಂಗಾಮಿ ನ್ಯಾಯಮೂರ್ತಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು ಹೇಳಿದೆ.
ಮಾಧ್ಯಮಗಳ ಮೇಲೆ ಸೆನ್ಸಾರ್ ವಿಧಿಸಲು ಹಾಗೂ ರಾಜಕೀಯ ವಿರೋಧಿಗಳು ಹೇಳಿಕೆ ನೀಡುವುದನ್ನು ತಡೆಯಲು ನ್ಯಾಯಾಲಯದಿಂದ ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಜೈಲಿನಲ್ಲಿ ಇರುವ ಅರವಿಂದ್ ಕ್ರೇಜಿವಾಲ್ ಅವರಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಬೇಕು ಎಂದು ಅವರು ಕೋರಿದ್ದರು. ಕ್ರೇಜಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಮಾಧ್ಯಮಗಳು ವೈಭವೀಕರಿಸುವ ಬಗೆಯಲ್ಲಿ ಹೆಡ್ಲೈನ್ ಸೂಚಿಸಬೇಕು ಎಂದು ಕೋರಿದ್ದರು.