More

  ಹರಿಯಾಣ: ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದ ಮೂವರು ಪಕ್ಷೇತರರು!

  ಚಂಡೀಗಢ: ಸಾರ್ವತ್ರಿಕ ಚುನಾವಣೆಯ ಹೊತ್ತಿನಲ್ಲಿ ಹರಿಯಾಣದಲ್ಲಿ ರಾಜಕೀಯ ಭಾರಿ ಬಿರುಗಾಳಿ ಎದ್ದಿದೆ. ಮೂವರು ಪಕ್ಷೇತರರು ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

  ಇದನ್ನೂ ಓದಿ: ಚಂಡೀಗಢ: ನಾಮಪತ್ರ ಸಲ್ಲಿಸುವ ಮುನ್ನವೇ ಚುನಾವಣಾ ಕಣದಿಂದ ಹಿಂದೆ ಸರಿದ ಅಭ್ಯರ್ಥಿ! ಕಾರಣ ಹೀಗಿದೆ..

  ಭಾರತೀಯ ಜನತಾ ಪಕ್ಷಕ್ಕೆ ನೀಡಿದ್ದ ಬೆಂಬಲ ವಾಪಸ್​ ಪಡೆದಿರುವ ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷೇತರ ಶಾಸಕರಾದ ಸೊಂಬೀರ್ ಸಾಂಗ್ಲಾನ್, ರಂಧೀರ್ ಗೊಲ್ಲೆನ್ ಹಾಗೂ ಧರ್ಮಪಾಲ್ ಗೊಂಡರ್ ಇದೀಗ ಕಾಂಗ್ರೆಸ್‌ನತ್ತ ವಾಲಿದ್ದಾರೆ.

  ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಉಪಸ್ಥಿತಿಯಲ್ಲಿ ರೋಹ್ಟಕ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು.

  90 ಶಾಸಕರ ಹರಿಯಾಣ ಬಲಾಬಲದಲ್ಲಿ ಸದ್ಯ ಬಿಜೆಪಿ ಸರ್ಕಾರದ ಸಂಖ್ಯೆ 40 ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಬೆಂಬಲ ವಾಪಸ್ ಪಡೆಯುವ ಮೊದಲೇ ಜೆಜೆಪಿ ಪಕ್ಷದ ಶಾಸಕರು ಬೆಂಬಲ ವಾಪಸ್ ಪಡೆದುಕೊಂಡಿದ್ದಾರೆ. ಇದೀಗ ಸರ್ಕಾರ ನಡೆಸಲು ನಯಬ್ ಸೈನಿ ಬಳಿ ಸಂಖ್ಯಾಬಲದ ಕೊರತೆ ಕಾಣುತ್ತಿದೆ. ನಯಬ್ ಸೈನಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

  ಈ ವಿಷಯದ ಕುರಿತು ಮಾತನಾಡಿದ ಸಿಎಂ ಸೈನಿಯ ಮಾಧ್ಯಮ ಕಾರ್ಯದರ್ಶಿ ಪ್ರವೀಣ್ ಅಟ್ರೆ, “ಮೂವರು ಸ್ವತಂತ್ರ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡುವುದರಿಂದ ಹರಿಯಾಣ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಹರಿಯಾಣ ಸರ್ಕಾರವು ಬಹುಮತವನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

  ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ತಡೆ

  See also  ಕಾಂಗ್ರೆಸ್ ಭದ್ರಕೋಟೆ ಮರು ನಿರ್ಮಿಸೋಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts