ರೋಗ ಲಕ್ಷಣ: ರೋಗವು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಕ್ಕೂ ಪೂರ್ವಭಾವಿಯಾಗಿ ಕೆಲವೊಂದಷ್ಟು ಚಿಹ್ನೆಗಳು ಶರೀರದಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಪೂರ್ವರೂಪ ಎನ್ನುತ್ತೇವೆ. ಆಹಾರವು ಅರ್ಧಪಚನವಾಗಿ ವಿಸರ್ಜನೆಯಾಗುವುದು, ಅಜೀರ್ಣವಾಗುವುದು, ಸಹಜವಲ್ಲದ ಬಾಯಾರಿಕೆ, ದೇಹದ ಬಲವು ಕ್ಷೀಣವಾಗುವುದು, ಆಲಸ್ಯ, ದೇಹವು ಭಾರವಾದಂತೆ ಅನಿಸುವುದು, ಮೈಕೈ ನೋವು, ಬಾಯಿರುಚಿ ಇಲ್ಲದಿರುವುದು, ಕೆಮ್ಮು, ಸುಸ್ತು, ಕಿವಿಯಲ್ಲಿ ಶಬ್ದ ಗುಯ್ ಗುಡುವುದು, ಕರುಳಿನಿಂದ ಅಪ್ರಾಕೃತವಾಗಿ ಶಬ್ದ ಉಂಟಾಗುವುದು ಇವುಗಳು ಗ್ರಹಣೀರೋಗದ ಪೂರ್ವ ಲಕ್ಷಣಗಳು. ಈ ಅವಧಿಯಲ್ಲೇ ರೋಗದ ಸುಳಿವು ವೈದ್ಯರಿಗೆ ದೊರೆತರೆ ವ್ಯಾಧಿಯನ್ನು ತಡೆದು ಗುಣಪಡಿಸುವುದು ಸುಲಭವಾಗುತ್ತದೆ. ಆಗಾಗ ಮಲಪ್ರವೃತ್ತಿಯಾಗುವುದು, ಸರಿಯಾದ ರೂಪಕ್ಕೆ ಬರದೆ ಅಪಕ್ವ ಮಲ ವಿಸರ್ಜನೆ, ಕೆಲವೊಮ್ಮೆ ಮಲಬದ್ಧತೆ, ಇನ್ನು ಕೆಲವೊಮ್ಮೆ ದ್ರವಮಲ ಪ್ರವೃತ್ತಿ, ರಕ್ತ, ಕೊಳೆತ, ಹೊಗೆಯ ದುರ್ಗಂಧದ ಮಲವಿಸರ್ಜನೆ, ಹುಳಿ, ಕಹಿ ರುಚಿ ಬಾಯಿಗೆ ಬಂದಂತಾಗುವುದು, ಎದೆ ಉರಿಯೊಂದಿಗೆ ಅದೇ ತೆರನಾದ ತೇಗು, ಬಾಯಾರಿಕೆ, ಬಾಯಿರುಚಿ ಇಲ್ಲದಿರುವುದು, ಅತಿಯಾದ ಜೊಲ್ಲುಸ್ರಾವ, ದೇಹವು ಕ್ಷೀಣಿಸುತ್ತಾ ದೇಹತೂಕ ನಷ್ಟವಾಗುವುದು, ಮೂಳೆಸಂಧಿಗಳಲ್ಲಿ ನೋವು, ಹಸ್ತ ಮತ್ತು ಪಾದಗಳಲ್ಲಿ ಊತ, ಮಾನಸಿಕ ದಣಿವು, ಕಣ್ಣು ಕತ್ತಲು ಹೋಗುವುದು, ಕರುಳಿನ ನೋವು, ಉರಿಯೂತ, ಹಳದಿ, ನೀಲಿ ಮಿಶ್ರಿತ ಹಳದಿ, ರಕ್ತ, ಪಿತ್ತ ಮಿಶ್ರಿತ ಮಲವಿಸರ್ಜನೆ ಮೊದಲಾದ ಲಕ್ಷಣಗಳನ್ನು ಈ ಗ್ರಹಣೀ ರೋಗದ ವಿವಿಧ ಪ್ರಕಾರಗಳಲ್ಲಿ ಕಾಣಬಹುದು.
ಕಾರಣವೇನು?: ಗ್ರಹಣೀ ರೋಗಕ್ಕೆ ಪಚನಶಕ್ತಿಯಲ್ಲಿ ಉಂಟಾಗುವ ಏರುಪೇರು ಮೂಲಕಾರಣ. ಗ್ರಹಣೀ ಗ್ರಹಣತಿ ಇತಿ ಗ್ರಹಣೀ ಎಂಬ ವ್ಯಾಖ್ಯೆಯಿದೆ. ಆಹಾರದ ಸ್ವೀಕಾರ, ಕರುಳಿನಲ್ಲಿ ನಡೆಯಬೇಕಾದ ಪಚನಕಾರ್ಯ, ಪೋಷಕಾಂಶಗಳ ಹೀರುವಿಕೆ, ರಕ್ತಗತವಾಗುವಿಕೆ ಇವು ನಾಲ್ಕಕ್ಕೂ ತಡೆಯಾದರೆ ಅದುವೇ ಗ್ರಹಣೀ ರೋಗ. ಕರುಳಿನ ಅಂತರ್ಭಾಗದಲ್ಲಿರುವ ಪಿತ್ತಧರಾ ಕಲಾಕ್ಕೆ ಹಾನಿಯುಂಟಾದರೆ ಅದು ರಚನಾತ್ಮಕ ತೊಂದರೆ. ಕರುಳಿನ ಗ್ರಹಣೀ ಭಾಗದಲ್ಲಿ ಜೀರ್ಣಕ್ರಿಯೆ ನಡೆಸುವ ಅಗ್ನಿಯಲ್ಲಿ ವ್ಯತ್ಯಯವಾಗಿ ಕ್ರಿಯಾತ್ಮಕ ತೊಂದರೆಯಾದರೆ ಅದು ಗ್ರಹಣೀ ದೋಷ. ಇದು ನಿರಂತರವಾಗಿ ಸಾಗಿ ಬಂದಾಗ ಅದು ಕಾಯಿಲೆಯಾಗಿ ರೂಪ ತಾಳುತ್ತದೆ. ಆಹಾರ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಆಗುವ ತೊಂದರೆಗಳಿಂದಾಗಿ ಪಚನಶಕ್ತಿ ದುರ್ಬಲವಾಗುತ್ತದೆ. ಇದರಿಂದ ಜಠರದಲ್ಲಿ ಆಮವೆಂಬ ಅಜೀರ್ಣ ವಿಷದ ಉತ್ಪತ್ತಿಯಾಗಿ ಕಾಯಿಲೆಯ ಉಗಮಕ್ಕೆ ಹಾದಿ ಮಾಡಿಕೊಡುತ್ತದೆ. ಐಬಿಎಸ್ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಾಗಿ ಕಂಡುಬರುತ್ತಿದ್ದು ಅಲ್ಸರೇಟಿವ್ ಕೊಲೈಟಿಸ್ ಪುರುಷರಲ್ಲಿ ತುಸು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಈ ಕಾಯಿಲೆ ಕಡಿಮೆ. ಭಾರತದಲ್ಲಿ ಐದು ಪ್ರತಿಶತ ಜನರು ತೊಂದರೆಗೆ ಒಳಗಾದರೆ, ಜಗತ್ತಿನಲ್ಲಿ ಸುಮಾರು ನೂರರಲ್ಲಿ ಹದಿನೈದು ಜನರನ್ನು ಬಾಧಿಸುವ ರೋಗವಿದು. ಭಾರತೀಯ ಜೀವನಶೈಲಿ ಹಾಗೂ ಮಾನಸಿಕ ನೆಮ್ಮದಿಯ ಮಹತ್ವವಿಲ್ಲಿ ಗೋಚರವಾಗುತ್ತದೆ. ಗ್ರಹಣೀರೋಗ ಬರದಂತೆ ತಡೆಯಲು, ಬಂದರೆ ನಿಮೂಲನೆ ಮಾಡಲು ಅವಶ್ಯವಾದ ರೋಗದ ಎಲ್ಲಾ ವಿಧವಾದ ಕಾರಣಗಳು ಹಾಗೂ ಪರಿಹಾರ ಉಪಾಯಗಳನ್ನು ತಿಳಿದುಕೊಳ್ಳಬೇಕಾಗಿದೆ.