ನ್ಯೂಸ್

ನೀವು ಎಂದಾದರೂ ಈ 'ಫ್ರೂಟ್ ಐಸ್ ಗೋಲಾ' ತಿಂದಿದ್ದೀರಾ? ವಿಡಿಯೋ ವೈರಲ್​ Fruit Ice Gola

Fruit Ice Gola: ಸೋಶಿಯಲ್​​ ಮೀಡಿಯಾದಲ್ಲಿ ಇತ್ತೀಚಿಗೆ ಫುಡ್​ vlog ಸಖತ್​​ ವೈರಲ್​ ಆಗುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಆಹಾರ ಪ್ರಿಯರನ್ನು ಇವು ಹೆಚ್ಚೆಚ್ಚು ಆಕರ್ಷಿಸುತ್ತದೆ. ಅದೇ ರೀತಿ ಇದೀಗ ಸದ್ದು ಮಾಡ್ತಿರೋದು 'ಫ್ರೂಟ್ ಐಸ್ ಗೋಲಾ'.

ಗುಜರಾತಿನ ಅಹಮದಾಬಾದ್‌ ಫುಡ್​​​ ಸ್ಟ್ರೀಟ್​​​ನಲ್ಲಿ ವ್ಯಾಪಾರಿಯೊಬ್ಬ ಕ್ಲಾಸಿಕ್ ಆಗಿ 'ಫ್ರೂಟ್ ಐಸ್ ಗೋಲಾ' ಮಾಡುತ್ತಿರುವ ವಿಡಿಯೋ ಎಲ್ಲರಲ್ಲಿಯೂ ಆಕರ್ಷಣೆ ಮತ್ತು ಕಳವಳ ಎರಡನ್ನೂ ಹುಟ್ಟುಹಾಕಿದೆ.

ಇನ್‌ಸ್ಟಾಗ್ರಾಮ್ ಫುಡ್ ವ್ಲಾಗರ್ ಒಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿರಪ್-ನೆನೆಸಿದ ಹಣ್ಣುಗಳಿಂದ ತುಂಬಿದ ಪಾತ್ರೆಯಲ್ಲಿ ದೊಡ್ಡ ಬಿಳಿ ಐಸ್ ಗೋಲಾ ಸ್ಟಿಕ್ ಅನ್ನು ಮುಳುಗಿಸಿ, ಕೆಲವೇ ಸೆಕೆಂಡುಗಳಲ್ಲಿ ಐಸ್ ಗೋಲಾ ವಿಧವಿಧವಾದ ಬಣ್ಣಗಳಿಗೆ ತಿರುಗಿ 'ಫ್ರೂಟ್ ಐಸ್ ಗೋಲಾ'ರೆಡಿಯಾದ ವಿಧಾನವನ್ನು ನೋಡಬಹುದು.

ಇಲ್ಲಿದೆ ನೋಡಿ ವಿಡಿಯೋ

ಹಾಗೆಯೇ ಈ ವಿಡಿಯೋಗೆ ಕಾಮೆಂಟ್​​ಗಳ ಸುರಿಮಳೆಯೇ ಬಂದಿದೆ. ಒಬ್ಬ ನೆಟ್ಟಿಗ "ಕ್ಯಾನ್ಸರ್ ಕೇವಲ ಒಂದು ತಿಂಗಳು ದೂರದಲ್ಲಿದೆ" ಎಂದು ವ್ಯಂಗ್ಯವಾಡಿದರೆ, ಮತ್ತೊಬ್ಬರು "ಮಾರ್ ಹಿ ದಾಲೋಗೆ" ಎಂಬ ನಾಟಕೀಯ ಗೀತೆಯೊಂದಿಗೆ ಅದನ್ನೇ ಹೇಳಿದರು. ಹಸಿರು ಸಿಕ್-ಫೇಸ್ ಮತ್ತು ವಾಕರಿಕೆ ಬರಿಸುವ ಎಮೋಜಿಗಳಿಂದ ಕಾಮೆಂಟ್‌ಗಳು ತುಂಬಿ ತುಳುಕುತ್ತಿದ್ದವು, ಇದು ಆಹಾರ ಪದ್ಧತಿಯ ಬಗ್ಗೆ ನೆಟ್ಟಿಗರ ಅಸಮ್ಮತಿಯನ್ನು ಸೂಚಿಸುತ್ತದೆ. ಆದರೂ ಈ ವೀಡಿಯೊ 50 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು ಒಂಬತ್ತು ಲಕ್ಷ ಲೈಕ್‌ಗಳನ್ನು ಗಳಿಸಿದೆ. (ಏಜೆನ್ಸೀಸ್​)