ನ್ಯೂಸ್

ಹಾಸನಾಂಬಾ ದೇಗುಲದ ಹುಂಡಿ ಎಣಿಕೆ: ಒಟ್ಟು 25.59 ಕೋಟಿ ರೂ ಸಂಗ್ರಹ | Hasanamba

ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬಾ(Hasanamba) ತಾಯಿಯ ದೇಗುಲದ ಹುಂಡಿಗೆ ಈ ಬಾರಿ ಒಟ್ಟು ಕಾಣಿಕೆ ಮೊತ್ತ 3.69 ಕೋಟಿ ರೂ ಬಂದಿದೆ.

ಅಲ್ಲದೆ, ವರ್ಷದ ಟಿಕೆಟ್ ಆದಾಯ 21.92 ಕೋಟಿ ಆಗಿದ್ದು, ಅಕ್ಟೋಬರ್ 10ರಿಂದ 22ರವರೆಗೆ ಒಟ್ಟಾರೆ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ 25.59 ಕೋಟಿ ಆಗಿದೆ ಎಂದು ದೇವಾಲಯ ಟ್ರಸ್ಟ್​ ತಿಳಿಸಿದೆ.

ಇದರಲ್ಲಿ ಸುಮಾರು 8 ರಿಂದ 10 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಅಲಂಕಾರ, ಹೂ ಅಲಂಕಾರ ಹಾಗೂ ಇತರೆ ಹಬ್ಬದ ಖರ್ಚುಗಳಿಗೆ ಬಳಸಲಾಗುತ್ತದೆ. ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿಡಲಾಗುತ್ತದೆ.

ಶುಕ್ರವಾರ ಸುಮಾರು 300 ಸಿಬ್ಬಂದಿಗಳು ಹೂಂಡಿಗಳನ್ನು ತೆರೆಯುವ ಮತ್ತು ಹಾಸನಾಂಬಾ ದೇವಿಗೆ ಭಕ್ತರು ನೀಡಿದ ಕಾಣಿಕೆಗಳನ್ನು ಎಣಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.