ಹರಿಯಾಣ: ಒಲಿಂಪಿಯನ್ ಮಹಿಳಾ ಕುಸ್ತಿಪಟುವಿನ ಫೋಟೋ ಮಾರ್ಫ್ ಮಾಡಿದ ವ್ಯಕ್ತಿಯೊಬ್ಬ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಇದೀಗ ಹರಿಯಾಣ ಪೊಲೀಸರು ಆತನನ್ನು ಸೋಮವಾರ ಬಂಧಿಸಿದ್ದಾರೆ.
ಆರೋಪಿ ಪ್ರಸಾರ ಮಾಡಿದ್ದ 30 ಸೆಕೆಂಡ್‌ಗಳ ತುಣುಕಿಗೂ ಮಹಿಳಾ ಕುಸ್ತಿಪಟುವಿಗೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕುಸ್ತಿಪಟುವಿನ ತಂದೆ ಜಿಂದ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಹರಿಯಾಣ ಪೊಲೀಸರು ಹಿಸಾರ್ ಜಿಲ್ಲೆಯ ಆರೋಪಿ ಅಮಿತ್ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
30 ಸೆಕೆಂಡ್‌ಗಳ ವಿಡಿಯೋದಲ್ಲಿ ಆರೋಪಿಯು ಕುಸ್ತಿಪಟುವಿನ ಮಾರ್ಫ್ ಮಾಡಿದ ಫೋಟೋವನ್ನು ಬಳಸಿದ್ದಾನೆ. ವಿಡಿಯೋ ಕ್ಲಿಪ್ ಓರ್ವ ಪುರುಷ ಮತ್ತು ಮಹಿಳೆಯದ್ದಾಗಿದೆ. ಆ ವಿಡಿಯೋದಲ್ಲಿನ ವ್ಯಕ್ತಿ ತಾನು ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಇರುವುದನ್ನು ಖಚಿತಪಡಿಸಿದ್ದಾನೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬದುಕು ಬದಲಿಸಿದ ಪಂಚಾಕ್ಷರ ಗವಾಯಿ ಸಿನಿಮಾ -ನಾದಬ್ರಹ್ಮ ಡಾ.ಹಂಸಲೇಖ ಹೇಳಿಕೆ – ಪುಟ್ಟರಾಜ ಪುರಸ್ಕಾರ ಪ್ರಶಸ್ತಿ ಪ್ರದಾನ
ಆರೋಪಿಯ ಉದ್ದೇಶವೇನು ಎಂಬುದನ್ನು ತಿಳಿಯಲು ಮಂಗಳವಾರ ನ್ಯಾಯಾಲಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,(ಏಜೆನ್ಸೀಸ್).