ನವದೆಹಲಿ: ಗಂಡನ ಕುಡಿತದ ಚಟ ಹೆಂಡತಿಯ ಸಾವಿಗೆ ಕಾರಣವಾಗಿದೆ. ಉತ್ತರ ಪ್ರದೇಶದ ಪಿಂಕು ಎಂಬಾತ ದಿನವೂ ಮದ್ಯಪಾನ ಮಾಡಿಕೊಂಡು ಮನೆಗೆ ಬರುತ್ತಿದ್ದ. ಇದರಿಂದ ಮನೆಯಲ್ಲಿ ನಿತ್ಯವೂ ಗಂಡ-ಹೆಂಡತಿಯ ನಡುವೆ ಕಲಹಕ್ಕೆ ಕಾರಣವಾಗಿತ್ತು. ಅದೊಂದು ದಿನ ಪತ್ನಿ ಕಲ್ಪನ ಗಂಡನಲ್ಲಿ ಮದ್ಯಪಾನ ಮಾಡಬೇಡಿ ಎಂದು ಕೇಳಿಕೊಂಡಿದ್ದಾಳೆ. ಇದರಿಂದ ಸಿಟ್ಟಾದ ಪತಿ ರಿಂಕು, ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಮನೆಯ ಗ್ಯಾಸ್ ಸ್ಟವ್ ಬೆಂಕಿಗೆ, ಪತ್ನಿಯ ಮುಖವನ್ನು ಹಿಡಿದು ಸುಟ್ಟಿದ್ದಾನೆ. ಈ ಘಟನೆ ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿತ್ತು.
ಪತ್ನಿಯನ್ನು ಕೊಲೆಗೈದ ನಂತರ ಆರೋಪಿ ಪಿಂಕು ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಹರ್ಯಾಣ, ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್ ಮುಂತಾದೆಡೆಗೆ ಕದ್ದುಮುಚ್ಚಿ ತೆರೆಳಿ ಪೊಲೀಸರಿಂದ ಬಚಾವಾಗುತ್ತಿದ್ದ. ಹೀಗಾಗಿ ಈತನನ್ನು ಪತ್ತೆ ಹಚ್ಚಿದವರಿಗೆ ಪೊಲೀಸ್ ಇಲಾಖೆ 5000 ರೂ. ಬಹುಮಾನ ಕೂಡ ಘೋಷಣೆ ಮಾಡಿತ್ತು. ಇದೀಗ ಒಂದೂವರೆ ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಹರ್ಯಾಣ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಕಳೆದ ವರ್ಷ ಆಗಸ್ಟ್ 6 ರಂದು ಪತ್ನಿ ಕಲ್ಪನಾ ಎಂದಿನಂತೆ ಬೆಳಗ್ಗೆ ಅಡುಗೆ ಕೆಲಸದಲ್ಲಿ ನಿರತಳಾಗಿದ್ದಳು. ಈ ವೇಳೆ ಪತಿ ಪಿಂಕು ಮದ್ಯಪಾನ ಮಾಡಿ ಬಂದಿದ್ದಾನೆ. ಈ ವೇಳೆ ಕಲ್ಪನಾ ಕುಡಿತವನ್ನು ಬಿಡುವಂತೆ ಕೇಳಿಕೊಂಡಿದ್ದಾಳೆ. ಇದರಿಂದ ಸಿಟ್ಟಾದ ಪತಿ ಪಿಂಕು, ಉರಿಯುತ್ತಿದ್ದ ಗ್ಯಾಸ್ ಸ್ಟವ್ಗೆ ಭಲವಂತವಾಗಿ ಪತ್ನಿಯ ಮುಖ ಹಿಡಿದಿದ್ದಾನೆ. ಇದರಿಂದ ಕಲ್ಪನಾಳ ಮುಖ ಹಾಗೂ ಕುತ್ತಿಯ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ನಂತರ ಪತಿ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಕಲ್ಪನಾಳನ್ನು ನೆರೆಹೊರೆಯ ಮಂದಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲ್ಪನಾ ಮೃತಳಾಗಿದ್ದಳು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.