ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ( Natasa Stankovic ) ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿರುವುದು ಗೊತ್ತಿರುವ ಸುದ್ದಿಯಾಗಿದೆ. ಆದರೆ ಈ ಜೋಡಿ ಬೇರೆಯಾಗುತ್ತಿದ್ದಂದೆ ಹಾರ್ದಿಕ್ ಅವರ ಜತೆ ಕೆಲವು ಮಾಡೆಲ್ಗಳ ಹೆಸರು ಕೇಳಿ ಬರುತ್ತಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪಾಂಡ್ಯ ಅವರ ಹೊಸ ಗರ್ಲ್ಫ್ರೆಂಡ್ ಸುದ್ದಿ ಹುರಿದಾಡುತ್ತಿದೆ.
ಜುಲೈ 2025 ರಲ್ಲಿ, ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಜಾಸ್ಮಿನ್ ವಾಲಿಯಾ ಮತ್ತು ಹಾರ್ದಿಕ್ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಪರಸ್ಪರ ಅನ್ ಫಾಲೋ ಮಾಡಿದರು. ಇದು ಅವರ ವಿಘಟನೆಯ ಸುದ್ದಿಗೆ ಕಾರಣವಾಯಿತು . ಈ ಸಂದರ್ಭದಲ್ಲಿ, ಹಾರ್ದಿಕ್ ಪಾಂಡ್ಯ ನಟಿ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹಾರ್ದಿಕ್ ಅವರು ( Hardik Pandya ) ಅಸ್ಸಾಮಿ ನಟಿ ಮತ್ತು ಮಾಡೆಲ್ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸ್ಟೋರಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ಅಥವಾ ಮಹಿಕಾ ಶರ್ಮಾ ಈ ಸುದ್ದಿಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಸುದ್ದಿಗಳು ಕೇವಲ ವದಂತಿಗಳಾಗಿ ಉಳಿದಿವೆ.
ಪಾಂಡ್ಯ ಈ ಹಿಂದೆ ಧರಿಸಿದ್ದ ಚಿರತೆ ಚರ್ಮದ ಹಾಗೆ ಕಾಣುವ ಬಾತ್ರೂಮ್ ನಿಲುವಂಗಿಯಲ್ಲಿ ನಟಿಯನ್ನು ನೋಡಬಹುದಾದ ರೀಲ್ ವೈರಲ್ ಆಗುತ್ತಿದೆ. ಹೀಗಾಗಿ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ.
ಮಹೀಕಾ ಶರ್ಮಾ ಭಾರತ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವ ಮಾಡೆಲ್ . ಮಹಿಕಾ ಶರ್ಮಾ ಒಬ್ಬ ಅಸ್ಸಾಮಿ ಚಲನಚಿತ್ರ ನಟಿ ಮತ್ತು ರೂಪದರ್ಶಿ. ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಮಿಸ್ ಟೀನ್ ನಾರ್ತ್ ಈಸ್ಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.