ನ್ಯೂಸ್

'ಹನುಮಾನ್' ಬರೆಯಿತು ಓಟಿಟಿಯಲ್ಲೂ ದಾಖಲೆ!

ಹೈದರಾಬಾದ್​: ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್ ಇಂಡಿಯಾ ಬ್ಲಾಕ್ಬಸ್ಟರ್ ಸಿನಿಮಾ 'ಹನುಮಾನ್' ಆಗಿದ್ದು, ಯುವ ನಾಯಕ ತೇಜ ಸಜ್ಜಾ ಮತ್ತು ನಟಿ ಅಮೃತಾ ಅಯ್ಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇಂಡಿಯನ್ ಸೂಪರ್ ಹೀರೋ ಕಾನ್ಸೆಪ್ಟ್ ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬ್ಲಾಕ್ ಬಸ್ಟರ್ ಆಗಿದ್ದು ಗೊತ್ತೇ ಇದೆ. ಆದರೆ ಥಿಯೇಟ್ರಿಕಲ್ ಬಿಡುಗಡೆಯಾದ ಎರಡು ತಿಂಗಳ ನಂತರ, ಇದು ಓಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಯಿತು. ಥಿಯೇಟರ್‌ಗಳಲ್ಲಿ ದಾಖಲೆಗಳನ್ನು ಮುರಿದ ಹನುಮಾನ್ ಓಟಿಟಿಯಲ್ಲಿ ಅದೇ ಪ್ರವೃತ್ತಿಯನ್ನು ಮುಂದುವರೆಸಿತು.

ಜನಪ್ರಿಯ ಪ್ಲಾಟ್‌ಫಾರ್ಮ್ ಜಿ5 ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾದ ಕೆಲವೇ ಗಂಟೆಗಳಲ್ಲಿ, ಇದು ಮಿಲಿಯನ್ ನಿಮಿಷಗಳ ಕಾಲ ಪ್ಲೇ ಮಾಡಿದ ದಾಖಲೆಯನ್ನು ಸೃಷ್ಟಿಸಿದೆ. ಈ ಚಿತ್ರವು ಪ್ರಸ್ತುತ ದಾಖಲೆಗಳ ಸರಣಿಯನ್ನು ಮುಂದುವರೆಸುತ್ತಿದೆ.

ಈ ಚಿತ್ರ ಐದು ದಿನಗಳಲ್ಲಿ 200 ಮಿಲಿಯನ್ ನಿಮಿಷಗಳ ಗಡಿ ದಾಟಿದೆ. ಈ ಚಿತ್ರ ಶೀಘ್ರದಲ್ಲೇ ದಕ್ಷಿಣದ ಇತರ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಹನುಮಾನ್ ಚಿತ್ರ ಇತರ ಭಾಷೆಗಳಲ್ಲಿ ಬಂದರೆ ಓಟಿಟಿಯಲ್ಲಿ ಇನ್ನೂ ಹೆಚ್ಚಿನ ದಾಖಲೆಗಳನ್ನು ಸೃಷ್ಟಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಜನವರಿ 12 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಹನುಮಾನ್, ಮಹೇಶ್ ಬಾಬು ಅವರ ಗುಂಟೂರು ಕರಮ್‌ನಂತಹ ದೊಡ್ಡ ಚಿತ್ರಗಳೊಂದಿಗೆ ಸ್ಪರ್ಧಿಸಿ ಗೆದ್ದಿದೆ. ಹಿಂದಿ ಅವತರಣಿಕೆಯಲ್ಲಿ 62 ಕೋಟಿ ಕಲೆಕ್ಷನ್ ಮಾಡಿದ ಹನುಮಾನ್​, ವಿದೇಶದಗಳಲ್ಲೂ 57 ಕೋಟಿ ಕಲೆಕ್ಷನ್ ಮಾಡಿದೆ.

ಚಂದಮಾಮನ ಕಥೆಗಳನ್ನು ನೆನಪಿಸುವ ಪರಿಕಲ್ಪನೆಯೊಂದಿಗೆ ತೆರೆಕಂಡ ಈ ಸಿನಿಮಾ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿತ್ತು. ಅಂಜನಾದ್ರಿ ಎಂಬ ಹಳ್ಳಿಯ ಸನ್ನಿವೇಶ, ಅತ್ಯುತ್ತಮ ಗ್ರಾಫಿಕ್ಸ್ ಜೊತೆಗೆ ತೇಜ ಸಜ್ಜ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಅವರ ಅಭಿನಯವೂ ಪ್ರೇಕ್ಷಕರನ್ನು ಆಕರ್ಷಿಸಿತು.

ಸಾಕ್ಷಾತ್ ಹನುಮಂತ ಕಾಣಿಸಿಕೊಳ್ಳುವ ದೃಶ್ಯದ ಕೊನೆಯಲ್ಲಿ ಚಿತ್ರಮಂದಿರದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅತಿಶಯೋಕ್ತಿಯಲ್ಲ.