ನ್ಯೂಸ್

ಒಟಿಟಿಗೆ ಲಗ್ಗೆಯಿಟ್ಟ ತೇಜ ಸಜ್ಜ ನಟನೆಯ 'ಹನು-ಮ್ಯಾನ್'!

ಬೆಂಗಳೂರು: ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ 'ಹನು-ಮ್ಯಾನ್' ಸಿನಿಮಾ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಆದಾಯವನ್ನು ಗಳಿಸಿತು. ಸೂಪರ್​ಹಿಟ್ ಚಿತ್ರವಾಗಿ ಹೊರಹೊಮ್ಮಿದ ನಟ ತೇಜ ಸಜ್ಜ ಅಭಿನಯದ ಈ ಸಿನಿಮಾ ಇದೀಗ ಒಟಿಟಿ ಪ್ಲಾಟ್​ಫಾರ್ಮ್​ಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಚಿತ್ರಮಂದಿರಗಳಲ್ಲಿ ಬಹುಪಾಲು ಯಶಸ್ಸು ಕಂಡ ಪ್ರಶಾಂತ್ ವರ್ಮಾ ನಿರ್ದೇಶನದ 'ಹನು-ಮ್ಯಾನ್'​ ಇದೇ ಮಾರ್ಚ್​ 02ರಂದು ಜೀ5 ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಲು ಮಿಸ್​ ಮಾಡಿಕೊಂಡ ಸಿನಿಪ್ರಿಯರು, ಈಗ ಮನೆಯಲ್ಲೇ ಕುಳಿತು ಚಿತ್ರವನ್ನು ನೋಡಬಹುದಾಗಿದೆ.

ಚಿತ್ರದಲ್ಲಿ ಅಮೃತಾ ಅಯ್ಯರ್, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್, ಗೆಟಪ್ ಶ್ರೀನು, ಸಮುದ್ರಕಣಿ, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ನಿರ್ಮಿಸಿದ್ದಾರೆ,(ಏಜೆನ್ಸೀಸ್).