ಮುಂಬೈ: ಸೂಪರ್ ಹೀರೋ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಜೋಡಿಯಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ 'ಹನು-ಮಾನ್' ರಿಲೀಸ್ ಆದ ಮೊದಲ ದಿನದಿಂದಲೂ ಸಿನಿಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆಯುವುದರ ಜತೆಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಆಕರ್ಷಕ ವಿಎಫ್ಎಕ್ಸ್ ಕೆಲಸಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಿತ್ರ ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಉಪ ಮುಖ್ಯಮಂತ್ರಿ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ ಯಾರು..ಇವರ ಹಿನ್ನೆಲೆ ಏನು?
ಸದ್ಯ ಸತತ ಪ್ರದರ್ಶನಗಳನ್ನು ಕಾಣುವ ಮುಖೇನ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ್ದು, ಎಲ್ಲೆಡೆಯಿಂದ ಉತ್ತಮ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಇದೀಗ ಸಿನಿಮಾ ಅಮೆರಿಕಾ ಬಾಕ್ಸ್ ಆಫೀಸ್ನಲ್ಲಿ ಮೈಲಿಗಲ್ಲು ಸಾಧಿಸಿದ್ದು, ಐದು ಮಿಲಿಯನ್ ಡಾಲರ್ ಗಳಿಕೆಯನ್ನು ಮೀರಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಟಾಪ್ 5 ಅತಿ ಹೆಚ್ಚು ಗಳಿಕೆ ಕಂಡ ತೆಲುಗು ಸಿನಿಮಾಗಳಲ್ಲಿ ಈಗ ಹನು-ಮ್ಯಾನ್ ಕೂಡ ಒಂದಾಗಿದ್ದು, ಚಿತ್ರದಲ್ಲಿ ತೇಜ ಸಜ್ಜ, ಅಮೃತಾ ಅಯ್ಯರ್, ಸಮುದ್ರಕನಿ, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್, ಸತ್ಯ, ಗೆಟಪ್ ಶ್ರೀನು ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಅವರ ಸಂಗೀತವಿದೆ,(ಏಜೆನ್ಸೀಸ್).