ಅಮೆರಿಕಾ: ಅಮೆರಿಕಾದ ಖ್ಯಾತ ಸಿರೀಸ್ ಹನ್ನಾ ಮೊಂಟಾನಾ ಖ್ಯಾತಿಯ ನಟ ಮಿಚೆಲ್ ಮುಸ್ಸು ಅವರನ್ನು ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.
ಅಂಗಡಿಯೊಂದರಿಂದ ಚಿಪ್ಸ್ ಪ್ಯಾಕೇಟ್ ಕದ್ದಿದ್ದಾನೆ. ಕದ್ದಿದ್ದಲ್ಲದೇ ಕುಡಿದು ತೂರಾಡಿ ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದ್ದ. ಸ್ಥಳೀಯ ಹೊಟೇಲೊಂದರಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿರುವ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಮಿಚೆಲ್‌ನನ್ನು ಬಂಧಿಸಲಾಗಿದೆ.
ರಾಕ್‌ವಾಲ್ ಪೊಲೀಸ್ ಪ್ರಕಾರ, 32 ವರ್ಷದ ನಟ ಮಿಚೆಲ್ ಹೋಟೆಲ್‌ಗೆ ಹೋಗಿ ಹಣ ಪಾವತಿಸದೇ ಅಲ್ಲಿ ಚಿಪ್ಸ್ ಪ್ಯಾಕೇಟ್ ತೆಗೆದುಕೊಂಡಿದ್ದಾನೆ. ಶಾಪ್ ಮಾಲೀಕರು ಹಣ ಕೇಳಿದಾಗ ಮೊದಲೇ ಪಾನಮತ್ತನಾಗಿದ್ದ ಮಿಚೆಲ್ ಅವಾಚ್ಯ ಪದಗಳಿಂದ ನಿಂದಿಸಿ ಹಣ ನೀಡದೇ ಹೊರಟು ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಒಂದು ರಾತ್ರಿ ಜೈಲಿನಲ್ಲಿ ಕಳೆದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಈತನು ಬಂಧನಕ್ಕೊಳಗಾಗಿ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ, 2011ರಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಆರೋಪದಡಿ ಈತನ ಬಂಧನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಿಚೆಲ್ ಮುಸ್ಸು ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಶೋ 'ಹನ್ನಾ ಮೊಂಟಾನಾ' ಸೀರಿಸ್‌ನಲ್ಲಿ ಖ್ಯಾತ ಗಾಯಕಿ ಹಾಗೂ ನಟಿ ಮಿಲ್ಲೆ ಸೈರಸ್ ಅವರ ಬೆಸ್ಟ್ ಫ್ರೆಂಡ್ ಒಲಿವರ್ ಒಕೆನ್ ಪಾತ್ರದಲ್ಲಿ ನಟಿಸಿದ್ದರು.