ಬೆಂಗಳೂರು: ಸ್ಟಾರ್ ಹೀರೋ ಮತ್ತು ಹೀರೋಯಿನ್ ಹಾಗೂ ನೆಚ್ಚಿನ ಪೋಷಕ ಕಲಾವಿದರ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ಆಗಿನ ಕಾಲದ ನಟ-ನಟಿಯರು ಅಥವಾ ಕಲಾವಿದರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೆ ಇರುತ್ತದೆ. ನಾನು ನಿಮಗೆ ಇಂಥಹದ್ದೆ ಒಂದು ಸ್ಟೋರಿಯನ್ನು ಹೇಳಲಿದ್ದೇನೆ.
ಸಿಲ್ಕ್ ಸ್ಮಿತಾ ಅವರನ್ನು ಚಿಕ್ಕವಯಸ್ಸಿನಲ್ಲಿ ಅತ್ಯಂತ ಹತ್ತಿರದಿಂದ ನೋಡಿದ ಹಾಗೂ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ಕನ್ನಡ ಕಲಾವಿದ ಅಜಯ್ ರಾಜ್. ಈ ನಟನನ್ನು ಇಂದು ನಮ್ಮ ಕನ್ನಡದ ಪ್ರೇಕ್ಷಕರು ಗುರುತು ಹಿಡಿಯುವುದು ಮುಕ್ತಮುಕ್ತ ಸೀರಿಯಲ್ನ ನಂಜುಂಡ ಎನ್ನುವ ಪಾತ್ರದ ಮೂಲಕವಾಗಿ. ಈ ನಟನ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ...
ನಟ ಅಜಯ್ ರಾಜ್ 1986ರ ಅಕ್ಟೋಬರ್ 7ರಂದು ಜನಿಸಿದರು. ಡಿಗ್ರಿ ವ್ಯಾಸಂಗ ಮಾಡಿರುವ ಇವರು, ನಂತರ ನಟನೆಯತ್ತ ಮುಖ ಮಾಡಿದರು. ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಸಹ ಕಲಾವಿದೆಯಾಗಿದ್ದು, ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಪದ್ಮನಿ ಪಾತ್ರ ಮಾಡ್ತಿದ್ದಾರೆ.
4ನೇ ವರ್ಷಕ್ಕೆ ಸಿನಿಮಾ ರಂಗಕ್ಕೆ ಕಾಲಿಟ್ಟ ಈ ನಟ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟ, ನಟಿಯ ಜತ ಕಾಣಿಸಿಕೊಳ್ಳುವ ಅವಕಾಶ ಒದಗಿ ಬಂದಿತ್ತು. ಶಾಲೆ ಮೆಟ್ಟಿಲು ಏರುವ ಮೊದಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಇಂದು ಕೂಡಾ ಉತ್ತಮ ಪಾತ್ರಗಳನ್ನು ಮಾಡುತ್ತಾ ಸಿನಿಮಾರಂಗದಲ್ಲಿ ತನ್ನದೆ ಆಗಿರುವ ಚಾಪು ಮೂಡಿಸುತ್ತಿರುವ ನಟ ಅಜಯ್ ರಾಜ್. ಬೆಂಗಳೂರಿನಲ್ಲಿ ಜನಿಸಿರುವ ಅಜಯ್ ರಾಜ್ ಅವರ ಕುಟುಂಬದಲ್ಲಿ 28 ಮಂದಿ ಸದಸ್ಯರಿದ್ದಾರೆ. ಕುಟುಂಬಸ್ಥರೆಲ್ಲರೂ ರಂಗ ಕಲಾವಿದರಾಗಿದ್ದರು. ಹೀಗಾಗಿ ಈ ಹಿನ್ನೆಲೆಯಲ್ಲಿ ಅವರು ನಟನೆ ಕಲಿತ್ತು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.
ಬಿಂಬ ಎನ್ನುವ ರಂಗ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾಗ ಹಳ್ಳಿ ಮೇಷ್ಟ್ರು ಸಿನಿಮಾದ ನಿರ್ದೇಶಕರು ಆಗಿರುವ ಪುರುಷೋತ್ತಮ್ ಅವರು ಈ ಸಿನಿಮಾಗಾಗಿ ಮೂವರು ಹುಡುಗರನ್ನು ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದೆ ಅಜಯ್ ರಾಜ್. ನಂತ್ರ ಹಳ್ಳಿ ಮೇಷ್ಟ್ರು ಸಿನಿಮಾಗೆ ಅವಕಾಶ ಸಿಕ್ಕಿತ್ತು. ರವಿಚಂದ್ರನ್ ಹಾಗೂ ಸಿಲ್ಕ್ ಸ್ಮಿತಾ ಅವರ ಜತೆ ನಟಿಸುವ ಅವಕಾಶ ಸಿಕ್ಕಿತ್ತು.. "ಹೋಗಿ ಹೋಗಿ ಸೆಕೆಂಡ್ ಹ್ಯಾಂಡ್ ಗಂಡನ ಮದುವೆ ಆಗ್ತಿಯಾ ತು" ಎನ್ನುವ ಡೈಲಾಗ್ ಸಖತ್ ವೈರಲ್ ಆಗಿತ್ತು. ಈ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು ಇದೆ ಅಜಯ್ ರಾಜ್. ಸಿನಿಮಾದಲ್ಲಿ ಮಾಡಿದ್ದು ಸಣ್ಣ ಪಾತ್ರವಾಗಿದ್ದರು ಬಹುದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು ಖಂಡಿತಾ ಹೌದು.
ನಂತರ ಕಲಿಯಲು ಇನ್ನು ಹೆಚ್ಚಿದೆ ಎಂದು ನಂತರ ರಂಗಭೂಮಿಯಲ್ಲಿ ತೊಡಗಿಕೊಂಡರು. ನಂತರ ಹೀಗೆ ಸಿನಿಮಾ ಅವಕಾಶಗಳು ಇವರನ್ನು ಅರೆಸಿ ಬಂದವು. ನಂತರ ಸೀರಿಯಲ್, ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಕನ್ನಡ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷೀನಿವಾಸ ಸೀರಿಯಲ್ನಲ್ಲಿ ಒಂದು ಬಹುಮುಖ್ಯವಾದ ಪಾತ್ರವನ್ನು ಮಾಡುತ್ತಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಹರೀಶ್ ಪಾತ್ರ ಮಾಡುತ್ತಿದ್ದಾರೆ. ಅಜಯ್ ರಾಜ್ ಒಂದು ಗಂಟೆಯ ಕಥೆ, ಮುಂದಿನ ನಿಲ್ದಾಣ ಹಾಗೂ ಇತ್ತೀಚೆಗೆ ತೆರೆಕಂಡ ಅಬ್ಬಬ್ಬ ಸಿನಿಮಾಗಳಲ್ಲಿ ನಟಿಸಿದ್ದಾರೆ.