ನ್ಯೂಸ್

ಸಚಿವ ಸ್ಥಾನ ಕಳೆದುಕೊಂಡ ನಾಗೇಶ್​ಗೆ ನಿಗಮ ಭಾಗ್ಯ!

ಬೆಂಗಳೂರು: ಸಚಿವ ಸಂಪುಟದಲ್ಲಿ ಉಳಿದುಕೊಳ್ಳಲು ಕೊನೇ ತನಕ ಹರಸಾಹಸಪಟ್ಟು, ಬೇರೆ ದಾರಿ ಕಾಣದೆ ಅಬಕಾರಿ ಸಚಿವ ಸ್ಥಾನಕ್ಕೆ ಎಚ್​.ನಾಗೇಶ್​ ರಾಜೀನಾಮೆ ಕೊಟ್ಟರು. ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿದ್ದ ನಾಗೇಶ್​ಗೆ ನಿಗಮ ಭಾಗ್ಯ ಕೊಟ್ಟು ಸಿಎಂ ಬಿ.ಎಸ್​. ಯಡಿಯೂರಪ್ಪ ಸಮಾಧಾನ ಮಾಡಿದ್ದಾರೆ.

ರಾಜೀನಾಮೆ ಕೊಡುವ ವೇಳೆ ತನಗೆ ನಿಗಮ ಕೊಡುವುದಾದರೆ ಅಂಬೇಡ್ಕರ್ ನಿಗಮವೇ ಬೇಕೆಂದು ಸಿಎಂ ಬಳಿ ನಾಗೇಶ್ ಪಟ್ಟು ಹಿಡಿದಿದ್ದರು. ಅದರಂತೆ ಅವರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲು ಸಿಎಂ ಅನುಮೋದನೆ ನೀಡಿದ್ದಾರೆ. ಇದನ್ನೂ ಓದಿರಿ ಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುನಿಕೃಷ್ಣ ಅವರನ್ನು ಮಾರುಕಟ್ಟೆ ಕಮ್ಯುನಿಕೇಷನ್ ಅಡ್ವರ್ಟೈಸ್ ಲಿಮಿಟೆಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಿಎಂ ಸೂಚನೆ ನೀಡಿದ್ದಾರೆ.