ನ್ಯೂಸ್

ಜಾರ್ಖಂಡ್‌​ನಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಇಬ್ಬರು ಪೊಲೀಸರು ಹುತಾತ್ಮ,| Jharkhand

Jharkhand: ಜಾರ್ಖಂಡ್ ನ ಪಾಲಮು ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯ ಟಿಎಸ್‌ಪಿಸಿ, CPI ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿಯು ಸಾವನ್ನಪ್ಪಿದ್ದು, ಮತ್ತು ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಗುರುವಾರ(ಸೆಪ್ಟೆಂಬರ್,3) ಪೊಲೀಸ್ ಇಲಾಖೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಾರ್ಖಂಡ್​ ಪೊಲೀಸ್​ ವಕ್ತಾರ ಮೈಕಲ್‌ರಾಜ್, ಟಿಎಸ್‌ಪಿಸಿಯ ಸದಸ್ಯ ಶಶಿಕಾಂತ್ ಗಂಜು ವಿರುದ್ಧ ಕಾರ್ಯಾಚರಣೆ ಶುರುವಾಗಿಸಿದೆ. ನಿನ್ನೆ ತಡರಾತ್ರಿ ಪೊಲೀಸ್ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಮತ್ತೊಬ್ಬರೊಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ, ಟಿಎಸ್‌ಪಿಸಿಯ ನಕ್ಸಲ್​ ಶಶಿಕಾಂತ್ ಗಂಜು ಹಿಡಿದುಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಣೆಯಾಗಿದೆ. ಈ ಕಾರ್ಯಚರಣೆಯು ಪಲಾಮು ಹಾಗೂ ಮನಟು ಪ್ರದೇಶದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಗಾಯಗೊಂಡ ಪೊಲೀಸರು ಆಸ್ಪತ್ರೆಗೆ ದಾಖಲು

ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಮೆಡಿನಿರಾಯಿ ಆಸ್ಪತ್ರೆ ಸೇರಿಸಲಾಯಿದೆ. ಇಬ್ಬರು ಭದ್ರತಾ ಪಡೆಗಳ ಮೃತಪಟ್ಟಿದ್ದಾರೆ. ಇನ್ನೊಬ್ಬನು ಗಾಯಗೊಂಡಿದ್ದಾರೆ ಎಂದು ಪಲಾಮು ಡಿಐಜಿ ನೌಶದ್ ಅಲಮ್ ತಿಳಿಸಿದರು.

ಅಲ್ಲದೆ, ಟಿಎಸ್‌ಪಿಸಿ ಕಾಮಂಡರ್ ಶಶಿಕಾಂತ್ ಗಂಜು ಮತ್ತು ತಂಡ ಕೇಡಲ್ ಗ್ರಾಮದಲ್ಲಿ ಇರುವ ಮಾಹಿತಿ ಬಂದ ಹಿನ್ನಲೆ ಕಾರ್ಯಚರಣೆ ಆರಂಭಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಪಡೆಗಳು ಸ್ಥಳವನ್ನು ತಲುಪಿದಾಗ, TSPC ಸದಸ್ಯರು ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಪಡೆಗಳ ಸಿಬ್ಬಂದಿಗೆ ಗುಂಡು ತಗಳಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಮೆಡಿನಿರಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಗೊಂಡ ಪೊಲೀಸರು ಚಿಕಿತ್ಸೆಗೆ ಒಳಗಾಗಿದ್ದಾರೆ ಹೇಳಿದ್ದಾರೆ, (ಏಜೆನ್ಸೀಸ್)