ನ್ಯೂಸ್

Video: ಭಾರತ-ಚೀನಾ ಯೋಧರ ಹೊಡೆದಾಟದ ವಿಡಿಯೋ ಬಹಿರಂಗ

ನವದೆಹಲಿ: ಕಳೆದ ವರ್ಷ ಪೂರ್ವ ಲಡಾಖ್​ನ ಗಲ್ವಾನ್ ನದಿ ಕಣಿವೆಯಲ್ಲಿ ನಡೆದಿದ್ದ ಭಾರತ ಚೀನಾ ಯೋಧರ ಕೈ ಕೈ ದೊಡೆದಾಟಕ್ಕೆ ಸಂಬಂಧಿಸಿದಂತೆ ಚೀನಾದ ಮಾಧ್ಯಮವೊಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

ವಿಡಿಯೋದಲ್ಲಿ ಗಲ್ವಾನ್ ನದಿ ದಾಟಿ ಚೀನಾ ಯೋಧರು ಇರುವತ್ತ ಭಾರತದ ನೂರಾರು ಯೋಧರು ಕೈಯಲ್ಲಿ ಲಾಟಿ ಹಿಡಿದು ನುಗ್ಗುತ್ತಿರುವುದು ಕಂಡು ಬಂದಿದೆ. ಚೀನಾದ ಸ್ಟೇಟ್ ಮೀಡಿಯಾ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಪರಸ್ಪರ ವಾಗ್ವಾದ ನಡೆದಿದ್ದಲ್ಲದೇ ನೂಕಾಟ ಕಂಡು ಬಂದಿದೆ.

ಕಳೆದ ವರ್ಷ ಪೂರ್ವ ಲಡಾಖ್​ನಲ್ಲಿ ಅಕ್ರಮವಾಗಿ ಚೀನಾ ಸೇನೆ ಬೀಡು ಬಿಟ್ಟು ಗಡಿ ಉದ್ವಿಗ್ನತೆಯನ್ನು ತೀವ್ರಗೊಳಿಸಿತ್ತು. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿತ್ತು. ಸಾಕಷ್ಟು ಯೋಧರನ್ನು ಜಮಾವಣೆ ಮಾಡಿ ಚೀನಾದ ಯೋಧರನ್ನು ಬೆದರಿಸಿತ್ತು.

ನವೆಂಬರ್​ನಲ್ಲಿ ಏಕಾಏಕಿ ಎರಡೂ ಕಡೆ ಯೋಧರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಘಟನೆಯಲ್ಲಿ ಭಾರತದ 20 ಯೋಧರು ಮೃತಪಟ್ಟಿದ್ದರು. ಅಲ್ಲದೇ ಚೀನಾದ 40 ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಇದಕ್ಕೆ ಎರಡೂ ದೇಶಗಳಲ್ಲಿ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು ಸಂಭವಿಸಿ ಯುದ್ದದ ವಾತಾವರಣ ನಿರ್ಮಾಣವಾಗಿತ್ತು.