ಕಲಬುರಗಿ: ನಸುಕಿನಲ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಬಿಸಿಲಿನಿಂದ ಬಸವಳಿದಿದ್ದ ನಾಗರಿಕರಿಗೆ ಮಳೆ ತಂಪೆರೆದಿದೆ.
ಬಿಸಿಲೂರು ಎಂದೆ ಕರೆಸಿಕೊಳ್ಳುವ ಕಲಬುರಗಿಯಲ್ಲಿ ಸುರಿದ ಮಳೆ ಭೂಮಿಯನ್ನು ತಂಪಾಗಿಸಿತು. ಮಾರ್ಚ್ ಮೊದಲ ವಾರದಲ್ಲಿ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ.
ದೇವರ ದರ್ಶನಕ್ಕೆ ಅಡ್ಡಿ: ಮಳೆಯಿಂದ ಮಾತೆ ಮಾಣಿಕೇಶ್ವರಿ ದೇವಿಯ ದರ್ಶನಕ್ಕೆ ತೊಂದರೆ ಎದುರಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ದೇವಿಯ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.
ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಮಳೆ ಹಿನ್ನೆಲೆಯಲ್ಲಿ ದೇವಾಲಯದಲ್ಲೇ ಆಶ್ರಯ ಪಡೆದಿದ್ದಾರೆ. ಇಡೀ ಜಿಲ್ಲೆಯಲ್ಲಿ ನಸುಕಿನ 4 ಗಂಟೆಯಿಂದ ಮಳೆ ಸುರಿದಿದೆ. (ದಿಗ್ವಿಜಯ ನ್ಯೂಸ್)