ನ್ಯೂಸ್

ಹೆಣ್ಣು ಮಗು ಜನಿಸಿದ ಖುಷಿ; 1.5 ಕೋಟಿ ರೂ. ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ...

ನವದೆಹಲಿ: ಹೆಣ್ಣು ಮಕ್ಕಳಿಗೆ ಗುಲಾಬಿ ಬಣ್ಣ ಎಂದರೆ ಸಖತ್​ ಇಷ್ಟ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಯಾವುದೇ ವಸ್ತು ಖರೀದಿ ಮಾಡಲು ಹೋದರು ಗುಲಾಬಿ ಬಣ್ಣದ್ದು ಇಲ್ವಾ ಎಂದು ಕೇಳುತ್ತಾರೆ. ಹೆಣ್ಣು ಮಗು ಹುಟ್ಟಿದ ಖುಷಿಯಲ್ಲಿ ತಂದೆಯೊಬ್ಬರು ತಮ್ಮ ದುಬಾರಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಗುಲಾಬಿ ಬಣ್ಣದಲ್ಲಿ ಮೊಡಿಫೈ ಮಾಡಿಸಿದ್ದಾರೆ.

ಗುಜರಾತಿನ ಸೂರತ್  ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಕೋಟಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಅಲ್ಲಿ ಗುಲಾಬಿ ಬಣ್ಣದಲ್ಲಿ ಅಲಂಕರಿಸಿ, ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಸೂರತ್ ನ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಐಷಾರಾಮಿ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ಮೋಡಿಫೈಗೊಳಿಸಿದ್ದಾರೆ.

ಕಾರಿನ ಸುತ್ತಲೂ ಗೊಂಬೆಗಳನ್ನು ಗ್ರಾಫಿಕ್ ಡಿಸೈನ್ ಮಾಡಿಸಿಕೊಂಡು, ದುಬಾರಿ ಕಾರನ್ನು ಆಟಿಕೆಯಂತೆ ಅಲಂಕರಿಸಿ ಆ ಕಾರಿನಲ್ಲಿ  ನಗರದ ಬೀದಿಗಳಲ್ಲಿ ಸವಾರಿ ಮಾಡಿದ್ದಾರೆ. ಹೆಣ್ಣು ಮಗುವಿನ ತಂದೆ ಆಗಿರುವ ಈ ವ್ಯಕ್ತಿಗೆ ನೆಟ್ಟಿಗರು ಶುಭ ಕೋರಿದ್ದಾರೆ.