ನ್ಯೂಸ್

ಇ-ಮೇಲ್​ ಕಳುಹಿಸಿ ಪ್ರಧಾನಿಗೆ ಬೆದರಿಕೆ; ಆರೋಪಿಯನ್ನು ಬಂಧಿಸಿದ ಎಟಿಎಸ್ ತಂಡ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಇ-ಮೇಲ್ ಮುಖಾಂತರ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಎಟಿಎಸ್ ತಂಡ ಮತ್ತು ಯುಪಿ ಪೊಲೀಸರು ಶನಿವಾರ ಆದರ್ಶ್ ನಗರ ಪ್ರದೇಶದಲ್ಲಿ ಅಮನ್ ಸಕ್ಸೇನಾ (28) ಎಂಬಾತನನ್ನು ಬಂಧಿಸಿದ್ದಾರೆ.

ಅಮನ್ ಸಕ್ಸೇನಾ ಬಾಂಬೆ ಐಐಟಿ ವಿದ್ಯಾರ್ಥಿ. ತನ್ನ ಸ್ನೇಹಿತೆಯೊಂದಿಗೆ ಸೇರಿಕೊಂಡು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆಯ ಇ-ಮೇಲ್ ಕಳುಹಿಸಿದ್ದ. ಬೆದರಿಕೆಗೆ ಸಂಬಂಧಿಸಿದಂತೆ ಗುಜರಾತ್ ಮೂಲದ ಮಹಿಳೆಯನ್ನೂ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ವರದಿಯ ಪ್ರಕಾರ ಅಮನ್ ಸಕ್ಸೇನಾ ತನ್ನ ಮೊಬೈಲ್​ ಫೋನನ್ನು ಸ್ವಿಚ್​ಆಫ್ ಮಾಡಿಕೊಂಡಿದ್ದ. ಹೀಗಾಗಿ ಎಟಿಎಸ್​​ ಅಧಿಕಾರಿಗಳು ಆತನ ತಂದೆಯ ಫೋನ್​ ನಂ. ಮೂಲಕ, ಅವನ ಸ್ಥಳವನ್ನು ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ. ಇದೀಗ ಅಮನ್ ಸಕ್ಸೇನಾ ತಂದೆ ಮಾತನಾಡುತ್ತಾ, ಮಗನ ಗೆಳತಿ ಅವನನ್ನು ತಪ್ಪು ದಾರಿಗೆ ಎಳೆದಿದ್ದಾಳೆ ಎಂದು ಆರೋಪಿಸಿದ್ದಾರೆ. ಆಕೆ ಬೆದರಿಕೆ ಕಳುಹಿಸಿರುವ ಸಾಧ್ಯತೆಯಿದ್ದು, ಇದಕ್ಕಾಗಿ ನನ್ನ ಮಗನ ಮೊಬೈಲ್​ ಫೋನ್ ಬಳಸಿರಬಹುದು ಎಂದು ಹೇಳಿದ್ದಾರೆ.

ಸೂರತ್‌ನ 12 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ರೋಡ್‌ಶೋ ನಡೆಸಿದ್ದರು. ಈ ವೇಳೆ ಲಕ್ಷಾಂತರ ಜನರು ಮೋದಿ ರೋಡ್​ ಶೋನಲ್ಲಿ ಪಾಲ್ಗೊಂಡಿದ್ದರು. ಸದ್ಯ ಮೋದಿ ಭಧ್ರತೆಗೆ ಎಸ್​​ಪಿಜಿ ತಂಡ ಸಾಕಷ್ಟು ಶ್ರಮ ವಹಿಸುತ್ತಿದ್ದ. ಪ್ರತಿಯೊಂದು ಬೆಳವಣಿಗೆಯತ್ತಲೂ ಗಮನ ಹರಿಸುತ್ತಿವೆ. (ಏಜೆನ್ಸೀಸ್)