ಸಾರಿಗೆ ಬಸ್​ನಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್​ ಟಿಕೆಟ್​ ವಿತರಿಸಿದರು.  
ನ್ಯೂಸ್

ಗ್ಯಾರೆಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ

ಕಿರುವಾರ ಎಸ್.ಸುದರ್ಶನ್

ಕೋಲಾರ: ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರೆಂಟಿಗಳಿಂದ ಬಡವರಿಗೆ ಅನುಕೂಲವಾಗಿದೆ, ಸರ್ಕಾರವು ಅಧಿಕಾರದಲ್ಲಿ ಇರುವ ತನಕ ಗ್ಯಾರೆಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದ ಸಾರಿಗೆ ಸಂಸ್ಥೆ ಬಸ್​ ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 1ನೇ ವರ್ಷದ ಶಕ್ತಿ ಯೋಜನೆ ಸಂಭ್ರಮಾಚರಣೆಯಲ್ಲಿ ಪ್ರಯಾಣಿಕರಿಗೆ ಟಿಕೆಟ್​ ವಿತರಿಸಿ ಮಾತನಾಡಿ, ರಾಜ್ಯಾದ್ಯಂತ ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಉತ್ತಮ ಪ್ರತಿಕ್ರಿಯೆ ಇದೆ ಎಂದರು.

ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು 25 ತಿಂಗಳು ಪೂರೈಸಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ, ಮನೆ ಯಜಮಾನಿಗೆ ಗೃಹ ಲಕ್ಷಿ$್ಮ ಯೋಜನೆಯಡಿ 2 ಸಾವಿರ ರೂ., ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವ ನಿಧಿಯನ್ನು ಸಮರ್ಪಕವಾಗಿ ಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಗಳನ್ನು ಚುನಾವಣೆ ಪೂರ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ರ್ಖಗೆ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಮುಂದಾಲೋಚನೆ ಇಟ್ಟುಕೊಂಡು ಘೋಷಣೆ ಮಾಡಿದರು. ಕೆಲವರು ಟಿಕೆ ಮಾಡಿದರು, ಇದರಿಂದ ಪ್ರಯೋಜನ ಪಡೆದುಕೊಂಡ ಬಡವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ. ಅವರ ಆಶೀರ್ವಾದಿಂದ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಯೋಜನೆಗಳ ಪ್ರಾಧಿಕಾಕಾರದ ಅಧ್ಯಕ್ಷರು, ಪದಾಧಿಕಾರಿಗಳು ಸಭೆಗಳನ್ನು ನಡೆಸಿ ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಯಾಣಿಕರ ಸಂಕ್ಯೆ 500 ಕೋಟಿ ಹಾಗೂ ಜಿಲ್ಲೆಯಲ್ಲಿ 10.24 ಕೋಟಿ ಪ್ರಯಾಣಿಕರು ಪ್ರಯೋಜನೆ ಪಡೆದುಕೊಂಡಿದ್ದಾರೆ. ತಂದೆ ಮನೆ, ಶಾಲಾ ಕಾಲೇಜು, ದೇವಾಲಯಗಳಿಗೆ ಹೋಗುವ ಮೂಲಕ ಶಕ್ತಿ ತುಂಬಿದ್ದಾರೆ ಎಂದರು.

ಗೃಹ ಲಕ್ಷಿ$್ಮ ಯೋಜನೆಯಡಿ ಲಾನುಭವಿಗಳಿಗೆ ಹಣ ಹಂಚಿಕೆಯಲ್ಲಿ ಒಂದೆರಡು ತಿಂಗಳು ಬಾಕಿ ಇರಬಹುದು, 8 ತಿಂಗಳು ಬಾಕಿಯಿಲ್ಲ. ಇದೀಗ 22 ತಿಂಗಳ ಹಣ ಜಮಾ ಆಗಿದ್ದ, ಬಾಕಿ ತಿಂಗಳ ಹಣ ಒಂದೇ ಬಾರಿ ಬಿಡುಗಡೆಯಾಗುತ್ತದೆ. ಇದರ ಬಗ್ಗೆ ಯಾವುದೇ ರೀತಿ ಅನುಮಾನ ಬೇಡ. ಸಚಿವರು, ಸಿಎಂ ಕಾರ್ಯ ಒತ್ತಡದಲ್ಲಿ ಇರುವುದರಿಂದಲ್ಲೂ ತಡವಾಗುತ್ತದೆ. ಸಿಎಂ, ಡಿಸಿಎಂ ದೆಹಲಿ ಪ್ರವಾಸದಲ್ಲಿ ಇರದ್ದರು, ತಡವಾಗಿದ್ದಕ್ಕೆ ಬೇಸರಗೊಳ್ಳುವುದು ಬೇಡ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್​, ಉಪಾಧ್ಯಕ್ಷ ಇದಾಯತ್​, ತಾಲೂಕು ಅಧ್ಯಕ್ಷ ಮುನಿಯಪ್ಪ, ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ಸದಸ್ಯರಾದ ಮಂಜುನಾಥ್​, ರಫಿಕ್​, ಮುಖಂಡ ಮುರಳಿ ಮತಿತರರಿದ್ದರು.

* 297 ಕೋಟಿ ಮೊತ್ತದ ಟಿಕೆಟ್​ ವಿತರಣೆ

ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್​ ಮಾತನಾಡಿ, ಶಕ್ತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, 11 ನೇ ಜೂನ್​ 2023 ರಿಂದ 11 ಜುಲೈ2024ಅಂತ್ಯದ ವರೆಗೆ ಜಿಲ್ಲೆಯಲ್ಲಿ 10.24 ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದು, 297 ಕೋಟಿ ರೂ ಮೊತ್ತದ ಉಚಿತ ಟಿಕೆಟ್​ಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ಒಬ್ಬರು ಮಹಿಳೆ ಬಸ್​ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ ಅವರೊಂದಿಗೆ ಮಕ್ಕಳು ಹಾಗೂ ಪತಿ ಕೂಡ ಬಸ್​ನಲ್ಲಿ ಪ್ರಯಾಣಸುತ್ತಿದ್ದು, ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ದಿನ 1.32 ಲಕ್ಷಕೂ ಅಧಿಕ ಮಹಿಳೆಯರು ಈ ಉಚಿತ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಯೋಜನೆ ಆರಂಭವಾದ ಜೂನ್​ 2023ರ ಮಾಹೆಯಲ್ಲಿ ಜಿಲ್ಲೆಯಲ್ಲಿ 10.86 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದು, ಜೂನ್​ 2024 ರಲ್ಲಿ 12.31 ಲಕ್ಷ ತಲುಪಿದ್ದು, ಇದೇ ಅವಧಿಯಲ್ಲಿ ದೈನಂದಿನ ಪ್ರಯಾಣದ ಮೊತ್ತ 10086.02ಲಕ್ಷಗಳಿಂದ 12314.07 ರೂ. ಗಳಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

* ನಗರ ಸಾರಿಗೆ ಪ್ರಯೋಜನ ಪಡೆದುಕೊಳ್ಳಿ

ನಗರಕ್ಕೆ ವಿಶೇಷವಾಗಿ ನಗರ ಸಾರಿಗೆಯನ್ನು 5 ಬಸ್ಸುಗಳ ಮೂಲಕ 2 ಮಾರ್ಗಗಳನ್ನು ಪ್ರಾರಂಭ ಮಾಡಿದ್ದು ಇದರಲ್ಲಿಯೂ ಶಕ್ತಿಯೋಜನೆಯನ್ನು ಪಡೆಯುತ್ತಿದ್ದಾರೆ. ಸಾರ್ವಜನಿರಿಂದಲೂ ಹೊಸ ಮಾರ್ಗಗಳಲ್ಲಿ ಬಸ್​ ಸಂಚಾರಕ್ಕೆ ಬೇಡಿಕೆ ಬರುತ್ತಿದ್ದು, ಪ್ರಸುತ ಇರುವ ಬಸ್ಗಳಲ್ಲಿ ಜನದಟ್ಟಣಿ ತಪ್ಪಿಸುವ ಉದ್ದೇಶದಿಂದ ಬಸ್ಗಳ ಟ್ರಿಪ್​ ಸಂಚಾರವನ್ನು ಅಧಿಕಗೊಳಿಸಲಾಗಿದೆ ಎಂದು ಶ್ರೀನಾಥ್​ ಹೇಳಿದರು.