Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 4ನೇ ದಿನವಾದ ಗುರುವಾರ(ಸೆ.4) GST ಕಡಿತ ಹಿನ್ನೆಲೆ ಭರ್ಜರಿ ವಹಿವಾಟು ನಡೆಸಿದೆ. ಅಲ್ಲದೆ, ಬೆಳಗಿನ ವಾಹಿವಾಟಿನಲ್ಲಿ ಸೆನ್ಸೆಕ್ಸ್ 800ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆ ಕಂಡಿದೆ.
ನಿಫ್ಟಿ50 ಸೂಚ್ಯಂಕವು 142 ಪಾಯಿಂಟ್‌ಗಳ ಏರಿಕೆಯೊಂದಿಗೆ 24,857 ಅಂಕಕ್ಕೆ ಜಿಗಿದಿದ್ದು, ಒಂದು ದಿನದ ಗರಿಷ್ಟ ಮಟ್ಟದ್ದಾಗಿದೆ. ಇನ್ನು ಬಿಎಸ್‌ಇ ಸೆನ್ಸೆಕ್ಸ್ 900 ಪಾಯಿಂಟ್‌ಗಳೊಂದಿಗೆ ಶೇ.0.64% ಏರಿಕೆಯೊಂದಿಗೆ 81,081 ಅಂಕಕ್ಕೆ ಜಿಗಿದಿದೆ.
ಇದನ್ನೂ ಓದಿ:ಪೋರ್ಚುಗಲ್ ರಾಜಧಾನಿ ಲಿಸ್ಬನ್ನಲ್ಲಿ ಹಳಿತಪ್ಪಿದ ಸ್ಟ್ರೀಟ್ಕಾರ್, 15 ಮಂದಿ ಸಾವು, 23 ಜನರಿಗೆ ಗಾಯ| Portugal
ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 452 ಲಕ್ಷ ಕೋಟಿ ರೂ.ಗಳಿಂದ 456 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿರುವುದರಿಂದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 4 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಏರಿಕೆಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 56ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ವಿವಿಧ ಹೊಸ ನಿರ್ಧಾರಗಳು ತಗೆದುಕೊಳ್ಳಲಾಗಿದೆ. ಅಲ್ಲದೆ, ನವರಾತ್ರಿಯಿಂದಲೇ ಅಂದರೆ, ಸೆ.22ರಂದು ಹೊಸ ಜಿಎಸ್‌ಟಿ ಪದ್ಧತಿ ಜಾರಿಗೆ ಬರಲಿದೆ ಎಂದು ಸಚಿವೆ ಘೋಷಿಸಿದ್ದಾರೆ. ಈ ಹಿನ್ನೆಲೆ ಇಂದು ಬೆಳ್ಳಂ ಬೆಳ್ಳಗ್ಗೆನೆ ಸೆನ್ಸೆಕ್ಸ್ ಏರಿಕೆಮ ಕಂಡಿದೆ.(ಏಜೆನ್ಸೀಸ್)