ನ್ಯೂಸ್

ತಾಳಿ ಕಟ್ಟುವ ಸಮಯಕ್ಕೆ ಕಾಯುತ್ತಿದ್ದ ವಧುವಿಗೆ ಶಾಕ್​ ಕೊಟ್ಟ ವರ: ಆಕೆಯ ಸಹೋದರ ಸಂಬಂಧಿ ಜತೆ ಪರಾರಿ! | Groom shocks

Groom shocks: ಇನ್ನೇನು ತಾಳಿ ಕಟ್ಟವಬೇಕು ಎನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಸಂಚಲನ ಸೃಷ್ಠಿಸಿದ ಘಟನೆ ಇತ್ತೀಚಿಗೆ ನಮ್ಮ ರಾಜ್ಯದಲ್ಲಿಯೇ ನಡೆದಿದೆ. ಇದೀಗ ಇಂಥದೊಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಹೌದು, ವರನಿಗಾಗಿ ರಾತ್ರಿವರೆಗೂ ವಧು ಕಾದ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಲೇಟ್ ಡ್ರೈವ್ ವಿತ್ ಬೆನ್, ಲಿಯಾಮ್ ಮತ್ತು ಬೆಲ್ಲೆ' ಎಂಬ ರೆಡಿಯೋ ಕಾರ್ಯಕ್ರಮದಲ್ಲಿ ಕೈಲೀ ಎಂಬ ಯುವತಿ ಇತ್ತೀಚಿಗೆ ತನ್ನ ಮದುವೆ ಮುರಿದು ಬಿದ್ದ ಮದುವೆ ಬಗ್ಗೆ ಹಂಚಿಕೊಂಡಿದ್ದಾರೆ.

''ನಾನು ಅವನು 6 ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಇನ್ನೇನು ಮದುವೆ ಕೂಡ ಫಿಕ್ಸ್​ ಆಯಿತು. ನಾನು ಒಟ್ಟಿಗೆ ಅದ್ದೂರಿಯಾಗಿ ಮದುವೆಗೆ ಮುನ್ನ ನಾವು ಒಟ್ಟಿಗೆ ಬಹಳಷ್ಟು ಫೋಟೋ ಶೂಟ್​ ಮಾಡಿಸಿಕೊಂಡವು. ತೆಗೆದುಕೊಂಡೆವು ಫೋಟೊಶೂಟ್​ ಸಮಯದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದೆ. ಮರುದಿನ ಮದುವೆ ನನ್ನ ಮದುವೆ 24 ಗಂಟೆಗಳ ಕಾಲ ಕೂಡ ನಡೆಯಲಿಲ್ಲ. ನಾನು ನನ್ನ ಕುಟುಂಬಸ್ಥರು ಮದುವೆ ಮಂಟಪದಲ್ಲಿ ಅವನ ಬರುವಿಕೆಯಾಗಿ ಕಾಯುದ್ದೇವೆ. ನಿಧಾನವಾಗಿ ಸಮಯ ಕಳೆದಂತೆ ಮಂಟಪ ಖಾಲಿ ಆಯಿತು. ನನ್ನ ಕುಟುಂಬಸ್ಥರು ಕೂಡ ಆಸೆ ಕಳೆದುಕೊಂಡರು. ನನಗೆ ಅಘಾತಗೊಳ್ಳುವ ವಿಷ ಕಿವಿಗೆ ತಗುಲಿತು. ಅದು ಏನೆಂದ್ರೆ ಆತ ನನ್ನ ಸಹೋದರ ಸಂಬಂಧಿ ಜತೆ ಓಡಿಹೋಗಿದ್ದಾನೆ ಎಂದು. ನಾನು ಅಲ್ಲೇ ಕುಸಿದುಬಿದ್ದೆ'' ಎಂದು ಹೇಳಿದ್ದಾಳೆ.

ಮಂಟಪದಲ್ಲಿ ರಾತ್ರಿಯಿಂದ ಮುಂಜಾನೆವರೆಗೂ ಒಬ್ಬಳೆ ಆಳುತ್ತಾ ಕೂತೆ. ಅವನು ಬಾರಲೇ ಇಲ್ಲ. ನಂಬಿಕೆ ಎಲ್ಲಾ ಕಳೆದು ಹೋಯ್ತು. ಪೋನ್​ ಮಾಡಿದೆ. ಮೆಸೇಜ್​​ ಮಾಡ್ದೆ ಯಾವುದಕ್ಕೂ ಉತ್ತರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಮದುವೆಯಾಗುತ್ತಿರಾ ಎಂದು ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಕೈಲೀ ಮದುವೆ ಎಂದ್ರೆ ನನಗೆ ಭಯವಾಗುತ್ತಿದೆ ಎಂದಿದ್ದಾರೆ.(ಏಜೆನ್ಸೀಸ್​)