ನ್ಯೂಸ್

ಜೆಸಿಬಿಯಲ್ಲೇ ಮದುವೆ ಮಂಟಪಕ್ಕೆ ಬಂದ ವರ; ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ..!

ಭುವನೇಶ್ವರ: ಮದುವೆಗಳು ಎಂದರೆ ಸಂಭ್ರಮ, ಸಡಗರ, ನೃತ್ಯ, ಸಂಗೀತ, ಆಹಾರ ಸಂಪ್ರದಾಯಗಳೊಂದಿಗೆ ತುಂಬಿದ ಭವ್ಯವಾದ ಕಾರ್ಯಕ್ರಮ. ವಿವಾಹದ ದಿನವನ್ನು ವಿಶೇಷ ದಿನವನ್ನಾಗಿ ಮಾಡಲು ವಧು ಮತ್ತು ವರನ ಎರಡೂ ಕುಟುಂಬಗಳಿಂದ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿರುತ್ತಾರೆ. ಇತ್ತೀಚೆಗೆ, ಒಡಿಶಾದಲ್ಲಿ ಮದುವೆಯ ಸಂದರ್ಭದಲ್ಲಿ ವರನೊಬ್ಬ ಜೆಸಿಬಿಯಲ್ಲಿ ಮೆರವಣಿ ಬಂದಿರುವ ಅಪರೂಪದ ದೃಶ್ಯದ ಫೋಟೋಗಳು ವೈರಲ್​ ಆಗಿವೆ.

ಬೌದ್ ಜಿಲ್ಲೆಯ ಚತ್ರಂಗಾ ಗ್ರಾಮದಲ್ಲಿ ವರನೊಬ್ಬ ಜೆಸಿಬಿಯ ಮೂಲಕ ಮೆರವಣಿಗೆ ಹೊರಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ನಡೆದಿದೆ.

ವರನನ್ನು ಗಂಗಾಧರ್ ಬೆಹೆರಾ ಎಂದು ಗುರುತಿಸಲಾಗಿದೆ. ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.

ಸಹೋದರ ಜೆಸಿಬಿ: ಮೂಲಗಳ ಪ್ರಕಾರ, ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜನರು ಶ್ಲಾಘಿಸುವುದರೊಂದಿಗೆ ವಿಶಿಷ್ಟ ಮದುವೆಯ ಮೆರವಣಿಗೆಯು ಈಗ ಇಡೀ ಪಟ್ಟಣದಲ್ಲಿ ಚರ್ಚೆಯಾಗಿದೆ.