ನ್ಯೂಸ್

ಮಾತುಕತೆಗೆ ರೆಡಿ ಇದ್ದೇವೆ, ಪ್ರಸ್ತಾವನೆ ಓದಿ- ರೈತ ನಾಯಕರಿಗೆ ಕೇಂದ್ರ ಕೃಷಿ ಸಚಿವ ತೋಮರ್

ನವದೆಹಲಿ: ಹೊಸ ಕೃಷಿ ಕಾನೂನು ವಿರೋಧಿ ಪ್ರತಿಭಟನೆ ನಡೆಸುತ್ತಿರುವ ರೈತ ನಾಯಕರ ಜತೆಗೆ ಮಾತುಕತೆಯ ಪ್ರಸ್ತಾಪವನ್ನು ಇಟ್ಟಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​, ನಾವು ಕಳುಹಿಸಿರುವ ಪ್ರಸ್ತಾವನೆಯನ್ನು ಒಮ್ಮೆ ಓದಿಕೊಳ್ಳಿ. ನಂತರ ಮಾತುಕತೆ ನಡೆಸೋಣ ಎಂದು ಗುರುವಾರ ಕರೆ ಕೊಟ್ಟಿದ್ದಾರೆ.

ಪ್ರತಿಭಟನಾನಿರತರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಮುಕ್ತವಾಗಿ ಮಾತುಕತೆ ನಡೆಸುವುದಕ್ಕೆ ಸರ್ಕಾರ ಸಿದ್ಧವಿದೆ. ಕಾನೂನಿನ ಯಾವೆಲ್ಲ ಅಂಶಗಳ ಬಗ್ಗೆ ಅವರ ವಿರೋಧ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಎಪಿಎಂಸಿ ಅಥವಾ ಎಂಎಸ್​ಪಿಗಳ ಮೇಲೆ ಕಾನೂನು ಯಾವ ರೀತಿಯ ಕೆಟ್ಟ ಪರಿಣಾಮವನ್ನೂ ಬೀರದು. ಇದನ್ನು ನಾವು ಅವರಿಗೆ ತಿಳಿಸಿ ಹೇಳುವುದಕ್ಕೆ ಪ್ರಯತ್ನಿಸಿದ್ದೇವೆ.

ಗುತ್ತಿಗೆ ಕೃಷಿ ಪದ್ಧತಿ ಬಂದರೆ ಕೃಷಿ ಭೂಮಿ ಉದ್ಯಮಿಗಳ ಪಾಲಾಗಲಿದೆ ಎಂದು ಗುಜರಾತ್​, ಮಹಾರಾಷ್ಟ್ರ, ಪಂಜಾಬ್​, ಹರಿಯಾಣ, ಕರ್ನಾಟಕಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅಂಥ ಯಾವುದೇ ಅನುಭವ ಆಗಿಲ್ಲ ಎಂದು ಸಚಿವ ತೋಮರ್ ವಿವರಿಸಿದರು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..