ನ್ಯೂಸ್

ಸಾರಿಗೆ ಬಸ್ ಅಪಘಾತ: 25 ವಿದ್ಯಾರ್ಥಿಗಳು ಸೇರಿ 37 ಮಂದಿಗೆ ಗಾಯ

ಉತ್ತರಕನ್ನಡ: ಯಲ್ಲಾಪುರದ ಆರತಿಬೈಲ್ ಬಳಿ ಸೋಮವಾರ ಮಧ್ಯಾಹ್ನ ಸಾರಿಗೆ ಬಸ್​ ಅಪಘಾತಕ್ಕೀಡಾಗಿದ್ದು, 25 ವಿದ್ಯಾರ್ಥಿಗಳು ಸೇರಿ 37 ಮಂದಿ ಗಾಯಗೊಂಡಿದ್ದಾರೆ.

ಕಳಚೆಯಿಂದ ಯಲ್ಲಾಪುರ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣತಪ್ಪಿ, ಧರೆಗೆ ಅಪ್ಪಳಿಸಿದ ಪರಿಣಾಮ ಬಸ್​ನ ಮುಂಭಾಗ ಜಖಂಗೊಂಡಿದೆ. ಇದನ್ನೂ ಓದಿರಿ ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​

ಬಸ್​ನಲ್ಲಿ ಬಹುತೇಕ ವಿದ್ಯಾರ್ಥಿಗಳೇ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.