ನ್ಯೂಸ್

ಇನ್ನು 65 ವರ್ಷ ಮೇಲ್ಪಟ್ಟವರು, ಕೋವಿಡ್ ರೋಗಿಗಳು ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ: ಸರ್ಕಾರ ಕೈಗೊಂಡ ಕ್ರಮವೇನು?

sspmiracle1982

ನವದೆಹಲಿ: ಸರ್ಕಾರ ಗುರುವಾರ ಚುನಾವಣಾ ನಡಾವಳಿ ನಿಯಮಗಳನ್ನು (1961) ತಿದ್ದುಪಡಿ ಮಾಡಿದ್ದು, ಈ ಮೂಲಕ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕರೊನಾವೈರಸ್ ಸೋಂಕಿಗೆ ಒಳಗಾದವರು ಅಥವಾ ಸೋಂಕು ಶಂಕಿತರಿಗೆ ಅಂಚೆ ಮತಪತ್ರ (ಪೋಸ್ಟಲ್ ಬ್ಯಾಲಟ್) ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಗುಡ್​ ನ್ಯೂಸ್ .. 90 ಹೊಸ ರೈಲುಗಳ ಆರಂಭಕ್ಕೆ ಭಾರತೀಯ ರೈಲ್ವೆ ಚಿಂತನೆ

ಹಲವಾರು ಆರೋಗ್ಯ ಸಲಹೆಗಳ ಪೈಕಿ, 65 ವರ್ಷಕ್ಕಿಂತ ಮೇಲ್ಪಟ್ಟವರು ಸಾಂಕ್ರಾಮಿಕ ವೈರಸ್ ಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಇರುವುದರಿಂದ ಹೊರಹೋಗದಂತೆ ಅಂಥವರನ್ನು ಕೇಳಿಕೊಳ್ಳಲಾಗಿದೆ. ಬಿಹಾರ ಚುನಾವಣೆಗೂ ಮುನ್ನ ಈ ಕ್ರಮಕ್ಕೆ ಮುಂದಾಗಿದೆ. ಕಕೊನಾವೈರಸ್ ಈಗ ರಾಜಕೀಯ ಚಟುವಟಿಕೆಗಳನ್ನು ನಿರ್ಣಯಿಸುವ ಅಂಶವಾಗಿದೆ.