More

    ಕರೊನಾದಿಂದ ಗುಣಮುಖನಾದರೂ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾದ!

    ಪುಣೆ: ಕರೊನಾ ಸೋಂಕಿಗೆ ಒಳಗಾದವರು ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
    ಆದರೆ ಇಲ್ಲಿಯ 45 ವರ್ಷದ ವ್ಯಕ್ತಿಯೊಬ್ಬರು ಕರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಕಾರಣ ಮಾತ್ರ ಇದುವರೆಗೆ ತಿಳಿದುಬಂದಿಲ್ಲ.

    ಇವರಿಗೆ ಹಾಗೂ ಪತ್ನಿಗೆ ಕರೊನಾ ವೈರಸ್‌ ಬಾಧಿಸಿತ್ತು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಬೇಗನೇ ಚೇತರಿಸಿಕೊಂಡು ಮನೆಗೆ ವಾಪಸಾದರು. ಹೆಂಡತಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆಸ್ಪತ್ರೆಯಿಂದ ನೇರವಾಗಿ ದೌಂಡ್‌ನ ಬೋರಿಪಾರ್ಧಿ ಗ್ರಾಮದಲ್ಲಿರುವ ತಮ್ಮ ಸಹೋದರನ ಮನೆಗೆ ಬಂದಿದ್ದಾರೆ. ಕುಟುಂಬವು ರಾತ್ರಿ ಒಟ್ಟಿಗೆ ಊಟ ಮಾಡಿದೆ. ನಂತರ ಎಲ್ಲರೂ ನಿದ್ರೆ ಮಾಡಿದ್ದಾರೆ. ಮಾರನೆಯ ದಿನ ಬೆಳಗ್ಗೆ ಅವರನ್ನು ಹುಡುಕಾಟ ಮಾಡಿದರೆ ಎಲ್ಲಿಯೂ ಸಿಗಲಿಲ್ಲ.

    ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಮುದಾಯ ಹರಡುವಿಕೆ ಇಲ್ಲ :ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟನೆ

    ನಂತರ ದೌಂಡ್ ದೌಂಡ್ ರೈಲ್ವೆ ನಿಲ್ದಾಣದ ಬಳಿಯ ಬೋರಿಪಾರ್ಧಿ ಗ್ರಾಮದ ಬಳಿ ರೈಲ್ವೆ ಹಳಿಗಳಲ್ಲಿ ಶವವಾಗಿ ಬಿದ್ದಿರುವುದನ್ನು ಜನರು ತಿಳಿಸಿದ್ದಾರೆ. ರೈಲಿನ ಮುಂದೆ ಹಾರಿ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಅವರ ಕುಟುಂಬ ಸದಸ್ಯರ ಪ್ರಕಾರ, ಇವರ ತಾಯಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಅಲ್ಲಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಇದೇ ಸಮಯದಲ್ಲಿ ಕರೊನಾ ಬಾಧಿಸಿದೆ. ಪತ್ನಿಗೂ ಸೋಂಕು ತಗುಲಿರುವುದರಿಂದ ಮತ್ತಷ್ಟು ಖಿನ್ನತೆಗೆ ಹೋಗಿದ್ದರು. ತಾಯಿಯ ನೆನಪಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದಿದ್ದಾರೆ. ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್‌)

    ವಿಮಾನ ಹಾರಲಿಲ್ಲ, ಆದರೂ ತವರಿಗೆ ಹೋದ ಅನುಭವದಿಂದ ಭಾವುಕರಾದ ಪ್ರಯಾಣಿಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts