More

    ವಿಮಾನ ಹಾರಲಿಲ್ಲ, ಆದರೂ ತವರಿಗೆ ಹೋದ ಅನುಭವದಿಂದ ಭಾವುಕರಾದ ಪ್ರಯಾಣಿಕರು!

    ತೈವಾನ್: ನಾವೈರಸ್‌ನ ಈ ಸಂದರ್ಭದಲ್ಲಿ ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ವಿಮಾನಯಾನವನ್ನು ರದ್ದು ಮಾಡಿವೆ. ಇದುವರೆಗೆ ಯಾವುದೇ ದೇಶಗಳು ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಿಲ್ಲ. ಕೆಲವು ದೇಶಗಳಲ್ಲಿ ದೇಶೀಯ ವಿಮಾನಗಳ ಹಾರಾಟವೂ ಆರಂಭವಾಗಿಲ್ಲ.

    ಈ ನಡುವೆ ತಮ್ಮ ತಾಯ್ನಾಡಿಗೆ ಹೋಗಲಾರದೇ ಸಂಕಟ ಪಡುತ್ತಿದ್ದಾರೆ. ಒಮ್ಮೆ ವಿಮಾನ ಹತ್ತಿ ಯಾವಾಗ ತವರು ಭೂಮಿಯನ್ನು ಸೇರುವೆವೋ ಎಂಬ ಹಂಬಲ. ಆದರೆ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ವಿಮಾನ ಹತ್ತುವುದು ಕನಸಿನ ಮಾತೇ.

    ವಿಮಾನ ಯಾವಾಗ ಆರಂಭಿಸುವರಿ? ಯಾವಾಗ ನಾವು ವಿಮಾನ ಹತ್ತುವುದು ಎಂದೆಲ್ಲಾ ತೈವಾನ್‌ನ ನಾಗರಿಕರು ಕರೆ ಮಾಡುವುದು ಹೆಚ್ಚಾಗುತ್ತಿದ್ದಂತೆಯೇ ವಿಮಾನಯಾನ ವಿಚಿತ್ರ ಆದರೆ ಕುತೂಹಲ ಎನಿಸುವಂಥ ಆಫರ್‌ ನೀಡಿದೆ. ಅದೇನೆಂದರೆ ವಿಮಾನ ಹತ್ತಬಹುದು ಆದರೆ ಹಾರುವುದಿಲ್ಲ ಎನ್ನುವ ಆಫರ್‌.

    ಇದನ್ನೂ ಓದಿ: ದೇವರನ್ನೇ ಪರೀಕ್ಷಿಸಿ ಔಷಧ ಕೊಡ್ತಾರೆ ವೈದ್ಯರು…! ಜಗನ್ನಾಥ ಮಂದಿರದಲ್ಲಿದೆ ಇಂಥದ್ದೊಂದು ಪದ್ಧತಿ

    ಅದೇನೆಂದರೆ, ಎಷ್ಟೋ ಸಲ ನಮಗೆ ಯಾವುದಾದರೂ ಸ್ಥಳಕ್ಕೆ ಹೋಗಲು ಆಗುವುದಿಲ್ಲವೆಂದಾದರೆ ಅಥವಾ ಯಾವುದಾದರೂ ವಸ್ತುವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಅದರ ಫೋಟೋ ನೋಡಿ ಸಮಾಧಾನ ಪಟ್ಟುಕೊಳ್ಳುವಂತೆ ವಿಮಾನಯಾನ ಸಂಸ್ಥೆಯೂ ಅಂಥದ್ದೇ ಒಂದು ಆಫರ್‌ ನೀಡಿತ್ತು.

    ಲಾಟರಿ ಮೂಲಕ ಕೆಲವು ಪ್ರಯಾಣಿಕರನ್ನು ಆಯ್ಕೆ ಮಾಡಿ ಅವರಿಗೆ ವಿಮಾನ ಹತ್ತುವ ಅವಕಾಶ ಕಲ್ಪಿಸಿತು. ಅಂತಾರಾಷ್ಟ್ರೀಯ ವಿಮಾನಕ್ಕೆ ಹೋಗುವಾಗ ಏನೆಲ್ಲಾ ನಿಯಮಗಳನ್ನು, ಷರತ್ತುಗಳನ್ನು ಅನ್ವಯ ಮಾಡಲಾಗುತ್ತದೆಯೋ ಅವೆಲ್ಲವೂ ಇಲ್ಲಿದ್ದವು. ಎಂಟ್ರಿಯಿಂದ ಹಿಡಿದು ವಿಮಾನ ಹತ್ತುವವರೆಗೆ ಎಲ್ಲಾ ನಿಯಮಗಳನ್ನೂ ಚಾಚೂತಪ್ಪದೆ ಪಾಲನೆ ಮಾಡಲಾಗಿತ್ತು. ಜತೆಗೆ ಲಾಕ್‌ಡೌನ್‌, ಕರೊನಾವೈರಸ್‌ ನಿಯಮಗಳ ಪಾಲನೆಯೂ ನಡೆಯಿತು.

    ಜನರು ವಿಮಾನ ಹತ್ತಿ ಕೂಡ ಕುಳಿತರು. ಆದರೆ ವಿಮಾನ ಮಾತ್ರ ಹಾರಲಿಲ್ಲ. ಆದರೆ ತಾವು ತಮ್ಮ ತವರಿನ ವಿಮಾನವನ್ನು ಹತ್ತಿದ ಖುಷಿಯಿಂದ ಅದೆಷ್ಟು ಮಂದಿ ಪುನೀತರಾದರು. ಅಲ್ಲಿ ಹೋದವರ ಪೈಕಿ ಹೆಚ್ಚಿನವರು ತಮಗೆ ತವರಿಗೆ ಹೋಗಿ ಬಂದಷ್ಟೇ ಖುಷಿಯಾಗಿದೆ ಎಂದು ಕಂಬನಿ ಮಿಡಿದರು. ಇನ್ನು ಕೆಲವರಂತೂ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ಕಣ್ಣೀರು ಹಾಕಿದರು.

    ಇವರ ಭಾವುಕತನವನ್ನು ನೋಡಿರುವ ತೈವಾನ್‌ ಇದೀಗ ವಿಮಾನಯಾನ ಆರಂಭವಾಗುವವರೆಗೆ ಪ್ರಯಾಣಿಕರಿಗೆ ಇದೇ ರೀತಿಯ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

    ಈ ಬ್ರ್ಯಾಂಡ್‌ ಬಿಯರ್‌ ಪ್ರಿಯರಾ? ಹಾಗಿದ್ರೆ ಓದೋ ಮುನ್ನ ಯೋಚ್ನೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts