ನ್ಯೂಸ್

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿ, ವೈನ್​ಶಾಪ್ ಪ್ರಾರಂಭಿಸಲ್ಲ: ಗೋವಿಂದ ಕಾರಜೋಳ

ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿ, ವೈನ್ ಶಾಪ್ ಪ್ರಾರಂಭ ಮಾಡುವುದಿಲ್ಲ. ಇದು ಬಿಜೆಪಿ ಸರ್ಕಾರದ ನೀತಿ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ನಾವು ರಾಜ್ಯದಲ್ಲಿ ಹೆಚ್ಚು ಮದ್ಯದಂಗಡಿ ತೆರೆಯುವ ಆದೇಶ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿ. ಆರ್​ಎಸ್​ಎಸ್ ಹಿನ್ನೆಲೆ ಇರುವ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಅದಕ್ಕೆ ಬದ್ಧರಾಗಿದ್ದಾರೆ. ನಮ್ಮ ಪ್ರತಿನಿಧಿಗಳು ಯಾರೂ ಸಹ ಸಾರಾಯಿ ಅಂಗಡಿ ತೆರೆಯಲು ಬಯಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿದ್ದು ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸರ್ಕಾರ. ಪಾಕೇಟ್ ಸಾರಾಯಿ ಮಾರಾಟ ಬಂದ್ ಮಾಡಿದ್ದೇವೆ. ಇದೀಗ ರಾಜ್ಯದಲ್ಲಿ ಮತ್ತೆ ಹೊಸದಾಗಿ ಮದ್ಯದಂಗಡಿ, ವೈನ್ ಶಾಪ್ ಪ್ರಾರಂಭ ಮಾಡುವುದಿಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದರು.