ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಗಾಗಿ 24,347 ಶಾಲೆಗಳಿಗೆ ಪುಸ್ತಕ ಹಾಗೂ ನಿಯತ ಕಾಲಿಕೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಹಾಗೂ 50 ಕೋಟಿ ರೂ. ವೆಚ್ಚದಲ್ಲಿ 47 ಕಸ್ತೂರ ಬಾ ವಸತಿ ಶಾಲೆಗಳ ದುರಸ್ತಿ ಹಾಗೂ ಸ್ಮಾರ್ಟ್ ಕ್ಲಾಸ್ ರೂಂ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ತೀರ್ವನಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, 2023-24ನೇ ಸಾಲಿಗೆ 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿನ 24,347 ಶಾಲೆಗಳಿಗೆ ಈ ಯೋಜನೆ ಪ್ರಯೋಜನ ದೊರೆಯಲಿದೆ. ಈ ಪೈಕಿ 14,049 ಕಿರಿಯ ಪ್ರಾಥಮಿಕ, 8344 ಸರ್ಕಾರಿ ಹಿರಿಯ ಪ್ರಾಥಮಿಕ, 1830 ಸರ್ಕಾರಿ ಪ್ರೌಢ ಶಾಲೆ, 76 ಕರ್ನಾಟಕ ಪಬ್ಲಿಕ್ ಸ್ಕೂಲ್ ಸೇರಿವೆ. ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಸ್ತೂರ ಬಾ ಗಾಂಧಿ ಬಾಲಿಕೆ ಹಾಸ್ಟೆಲ್ಗಳಲ್ಲಿ ಡಾರ್ವಿುಟರಿ ನಿರ್ವಣ, ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್ ರೂಂ ಅಭಿವೃದ್ಧಿ ಹಾಗೂ ವಸತಿ ಶಾಲೆ ಮತ್ತು ಹಾಸ್ಟೆಲ್ಗಳಿಗೆ ಕಾಟ್ಗಳ ಖರೀದಿಗೆ ಒಟ್ಟು 50 ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತ್ತು ಎದ್ದುಕಾಣುವ ಅಂಗವಿಕಲರ ಮೀಸಲಾತಿ ಒಳಗೊಂಡ ಒಂದೇ ರೋಸ್ಟರನ್ನು ಸಿದ್ಧಪಡಿಸಲು ಒಪ್ಪಿಗೆ ನೀಡಲಾಗಿದೆ.
ಸಲಕರಣೆ ನಿರ್ವಹಣೆಗೆ ಪಿಪಿಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2731 ಆರೋಗ್ಯ ಸಂಸ್ಥೆಗಳಲ್ಲಿ ಜೈವಿಕ ವೈದ್ಯಕೀಯ ಸಲಕರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ವಾರ್ಷಿಕ ವೆಚ್ಚ 32.74 ಕೋಟಿ ರೂ. ಅಂದಾಜು ವೆಚ್ಚದಲ್ಲಿ 3 ವರ್ಷ ಗಳ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವ ಹಣೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಮೇಲ್ಮನವಿ ಮಾಡಲು ತೀರ್ಮಾನ: ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಸಂಸ್ಥೆಗಳಿಗೆ ಕೋವಿಡ್ ಸಂದರ್ಭದಲ್ಲಿ ಮೆ. ಪೋ›ಡೆಂಟ್ ಮ್ಯಾನೇಜ್ವೆುಂಟ್ ಸಲ್ಯೂಷನ್ಸ್ ಮುಂಬೈ ಮತ್ತು ಲಾಜ್ ಎಕ್ಸ್ಪೋರ್ಟ್ ಲಿಮಿಟೆಡ್ ಬೆಂಗಳೂರು ಇವರು ಪಿಪಿಇ ಕಿಟ್ಗಳನ್ನು ಸರಬರಾಜು ಮಾಡಿರುವ ಬಗ್ಗೆ ಬಿಲ್ ಪಾವತಿ ಸಂಬಂಧ ಉಚ್ಚ ನ್ಯಾಯಾಲಯ 15.09.2023 ರಂದು ನೀಡಿರುವ ತೀರ್ಪಿನಂತೆ 38.26 ಕೋಟಿ ರೂ.ಗಳ ಮೊತ್ತವನ್ನು ಉಚ್ಚ ನ್ಯಾಯಾಲಯದಲ್ಲಿ ಠೇವಣಿ ಇಡಲು ಆ ತೀರ್ಪಿನ ವಿರುದ್ಧ ಮೇಲ್ಮನವಿ ಮಾಡಬಹುದು ಎಂಬ ಕಾರಣಕ್ಕೆ ಕಾನೂನು ಇಲಾಖೆಗೆ ಶಿಫಾರಸು ಮಾಡಲಾಗಿದೆ. ಎನ್ಜಿಟಿ ಪರಿಸರ ಪರಿಹಾರ ನಿಧಿಯಡಿ ತ್ವರಿತವಾಗಿ ಎರಡನೇ ಹಂತದ 53 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಒಳಚರಂಡಿ ಮಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಎನ್ಜಿಟಿ ಪರಿಸರ ಪರಿಹಾರ ನಿಧಿಯಡಿ 1518 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ / ಉನ್ನತೀಕರಣ ಕಾಮಗಾರಿಗಳನ್ನು ಕೆಯುಐಡಿಎಫ್ಸಿಯಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹಬ್, ಸ್ಪೋಕ್ಗೆ ಅನುಮೋದನೆ: ಪಾರ್ಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಕರ್ನಾಟಕದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯನ್ನು ಎರಡು ಹಂತಗಳಲ್ಲಿ 51.44 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು, ಮೊದಲನೇ ಹಂತದಲ್ಲಿ ನಿಮ್ಹಾನ್ಸ್ ಬೆಂಗಳೂರನ್ನು ‘ಹಬ್’ ಮತ್ತು ಕಿಮ್ಸ್ ಹುಬ್ಬಳ್ಳಿಯನ್ನು ‘ಸ್ಪೋಕ್’ ಆಗಿ ಕಾರ್ಯನಿರ್ವಹಿಸಲು ಒಟ್ಟು 11.26 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಜನವರಿ 15, ಸೋಮವಾರ- ಮಕರ ಸಂಕ್ರಾಂತಿ
ಜನವರಿ 26, ಶುಕ್ರವಾರ- ಗಣರಾಜ್ಯೋತ್ಸವ
ಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿ
ಮಾರ್ಚ್ 29, ಶುಕ್ರವಾರ- ಗುಡ್ ಪ್ರೖೆಡೇ
ಏಪ್ರಿಲ್ 9, ಮಂಗಳವಾರ- ಯುಗಾದಿ
ಏಪ್ರಿಲ್ 11, ಗುರುವಾರ- ರಂಜಾನ್
ಮೇ 1, ಬುಧವಾರ- ಕಾರ್ವಿುಕರ ದಿನಾಚರಣೆ
ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ
ಜೂನ್ 17, ಸೋಮವಾರ- ಬಕ್ರೀದ್
ಜುಲೈ 17, ಬುಧವಾರ- ಮೊಹರಂ ಕಡೇದಿನ
ಆಗಸ್ಟ್ 15, ಗುರುವಾರ- ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 7, ಶನಿವಾರ- ವರಸಿದ್ದಿ ವಿನಾಯಕ ವ್ರತ
ಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ಆಯುಧ ಪೂಜೆ
ಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿ
ನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವ
ನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 18, ಸೋಮವಾರ- ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ- ಕ್ರಿಸ್ವುಸ್
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂತೆ ಸೌರ ವಿಜಯ ದಶಮಿ (12.10.2024) ಈ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ. 1.4.2024ರ ಬ್ಯಾಂಕುಗಳ ಹಾಗೂ ಸರ್ಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯ ದಿನ ಆಗಿರುವುದರಿಂದ ಆ ದಿನದಂದು ವಾಣಿಜ್ಯ ಹಾಗೂ ಸರ್ಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.