ನ್ಯೂಸ್

ನಿಮ್ಮ ಮನೆಯಲ್ಲಿ ಉಳಿದ ಇಡ್ಲಿ ಇದೆಯೇ? ಇದ್ರೆ ಸಖತ್​ ಟೇಸ್ಟಿಯಾದ ಇಡ್ಲಿ ಮಂಚೂರಿಯನ್ ಟ್ರೈ ಮಾಡಿ! Idli Manchurian

Idli Manchurian : ನೀವು ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಉಪಹಾರವೆಂದರೆ ಅದು ಇಡ್ಲಿ. ಆದರೆ, ಇಡ್ಲಿ ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಮನೆಯಲ್ಲಿ ಯಾವಾಗಲೂ ಸ್ವಲ್ಪ ಇಡ್ಲಿ ಉಳಿದುಬಿಡುತ್ತದೆ.

ಉಳಿದ ಇಡ್ಲಿಯನ್ನು ಕೆಲವರು ಬೀಸಾಡುತ್ತಾರೆ. ಆದರೆ, ಆ ರೀತಿ ಮಾಡಬೇಡಿ. ಉಳಿದ ಇಡ್ಲಿಯಿಂದ ಏನಾದರೂ ಮಾಡಬಹುದಾ ಎಂದು ನೀವು ಚಿಂತೆ ಮಾಡುತ್ತಿದ್ದರೆ, ಒಮ್ಮೆ ಇಡ್ಲಿ ಮಂಚೂರಿಯನ್ ಅನ್ನು ಟ್ರೈ ಮಾಡಿ ನೋಡಿ. ಈ ಇಡ್ಲಿ ಮಂಚೂರಿಯನ್​ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಖಂಡಿತ ಇಷ್ಟವಾಗುತ್ತದೆ.

ಹಾಗಾದರೆ, ಉಳಿದ ಇಡ್ಲಿಗಳನ್ನು ಬಳಸಿ ಇಡ್ಲಿ ಮಂಚೂರಿಯನ್ ಮಾಡುವುದು ಹೇಗೆ ಎಂದು ನಾವೀಗ ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು

* ಇಡ್ಲಿ-5

* ಗೋಧಿ ಹಿಟ್ಟು - 2 ಚಮಚ

* ಅಕ್ಕಿ ಹಿಟ್ಟು- 2 ಚಮಚ

* ಕಾರ್ನ್‌ಸ್ಟಾರ್ಚ್ - 2 ಚಮಚ

* ಅಚ್ಚ ಖಾರದ ಪುಡಿ- ಅರ್ಧ ಚಮಚ

* ಮೆಣಸಿನ ಪುಡಿ-1 ಚಮಚ

* ಉಪ್ಪು- ಅಗತ್ಯಕ್ಕೆ ತಕ್ಕಂತೆ

* ಸೋಯಾ ಸಾಸ್ - 1/2 ಚಮಚ

* ಎಣ್ಣೆ - ಅಗತ್ಯಕ್ಕೆ ತಕ್ಕಂತೆ

* ಕತ್ತರಿಸಿದ ಬೆಳ್ಳುಳ್ಳಿ - 1/2 ಚಮಚ

* ಕತ್ತರಿಸಿದ ಶುಂಠಿ - 1 ತುಂಡು

* ಕತ್ತರಿಸಿದ ಹಸಿರು ಮೆಣಸಿನಕಾಯಿ-1

* ಸಣ್ಣಗೆ ಹೆಚ್ಚಿದ ಈರುಳ್ಳಿ-1

* ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ-1

* ಟೊಮೆಟೋ ಸಾಸ್ - 1 ಚಮಚ

* ಚಿಲ್ಲಿ ಸಾಸ್ - 1 ಚಮಚ

* ಸೋಯಾ ಸಾಸ್ - 1 ಚಮಚ

* ಸ್ಪ್ರಿಂಗ್ ಈರುಳ್ಳಿ - ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ

ಮೊದಲು ಇಡ್ಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಹಿಟ್ಟು, ಮೆಣಸಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು, ಸೋಯಾ ಸಾಸ್ ಸೇರಿಸಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿದ ಇಡ್ಲಿಯನ್ನು ಸೇರಿಸಿ ಮತ್ತು ಗೋಬಿಯಂತೆ ಎಣ್ಣೆಯಲ್ಲಿ ಫ್ರೈ ಮಾಡಿ.

ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಸುರಿದು, ಸ್ವಲ್ಪ ಬಿಸಿಯಾದ ಬಳಿಕ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಶುಂಠಿ, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈಗ ನುಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. ನಂತರ ಹುರಿದ ಇಡ್ಲಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದರ ಮೇಲೆ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಸಿಂಪಡಿಸಿ. ಈಗ ರುಚಿಕರವಾದ ಇಡ್ಲಿ ಮಂಚೂರಿಯನ್ ಸವಿಯಲು ಸಿದ್ಧ. ಹೊಸದಾಗಿ ಏನಾದರೂ ಟ್ರೈ ಮಾಡಬೇಕೆಂದರೆ ನೀವಿದನ್ನು ಟ್ರೈ ಮಾಡಬಹುದು. (ಏಜೆನ್ಸೀಸ್​)