ನ್ಯೂಸ್

ಬೀದಿ ವ್ಯಾಪಾರಿಗಳಿಗೆ ಗೂಗಲ್ ಪೇ ಸಾಲ!

Webdesk - Narayanaswamy

ನವದೆಹಲಿ: ರಾಷ್ಟ್ರದಲ್ಲಿ ನಿತ್ಯ ಲೆಕ್ಕ ಪ್ರಕಾರ ಸರಕುಗಳನ್ನು ತಂದು ಮಾರಿಕೊಂಡು ಜೀವನ ಸಾಗಿಸುವ ಬೀದಿ ವ್ಯಾಪಾರಿಗಳಿಗೆ ಸಾಲ ಬೇಕೆಂದರೆ ಬ್ಯಾಂಕ್​ ಅಥವಾ ಇತರೆ ಫೈನಾನ್ಸ್​ ಕಂಪೆನಿಗಳಿಗೆ ಅಲೆಯುವ ಪರಿಸ್ಥಿತಿ ಇದೆ.

ಆದರೆ ಈ ತೊಂದರೆಯಿಂದ ವ್ಯಾಪಾರಿಗಳನ್ನು ಪಾರುಮಾಡಲು ಪ್ರಮುಖ ಟೆಕ್​ ದಿಗ್ಗಜ ಗೂಗಲ್​ ಪ್ರಮುಖ ತೀರ್ಮಾನ ತೆಗೆದುಕೊಂಡಿದೆ. ತನ್ನ ಯುಪಿಐ ಪೇಮೆಂಟ್ಸ್​ ಫ್ಲಾಟ್​ಫಾರಂ ಗೂಗಲ್​ ಪೇ ಮುಖಾಂತರ ಸಾಲ ಒದಗಿಸಲು ಸಿದ್ಧವಾಗಿದೆ.

ನವದೆಹಲಿಯಲ್ಲಿ ಗೂಗಲ್ ನ 9ನೇ ಗೂಗಲ್​ ಫಾರ್ ಭಾರತ್​ ವಾರ್ಷಿಕೋತ್ಸವದಲ್ಲಿ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರ ಭಾಗವಾಗಿ ಕಂಪನಿಯು ಭಾರತದ ವ್ಯಾಪಾರಿಗಳಿಗೆ ಈ ಶುಭವಾರ್ತೆ ತಿಳಿಸಿದೆ. ಲೋನ್‌ಗಳು 10,000 ರೂ.ನಿಂದ 1 ಲಕ್ಷ ರೂ.ವರೆಗೆ ಗೂಗಲ್​ ಪೇ ಮೂಲಕ ಮರುಪಾವತಿ ಅವಧಿಯು 7 ದಿನದಿಂದ 12 ತಿಂಗಳು ಇರುತ್ತದೆ.

ಮರುಪಾವತಿಗೆ ನಿತ್ಯ, ತಿಂಗಳಿಗೊಮ್ಮೆ ಅವಕಾಶವಿರುತ್ತದೆ. ಇದರಲ್ಲಿ ಡೇಟಾ ಗೌಪ್ಯತೆ, ಭದ್ರತೆ, ಒಪ್ಪಿಗೆ ಮತ್ತು ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಗೂಗಲ್​ ಪೇನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.